CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇಂದಿರಾಕ್ಯಾಂಟೀನ್‌ಗೆ ಆಹಾರಪೂರೈಸಲು ಮುಂದಾದ ಪ್ರತಿಷ್ಠಿತ ಹೊಟೇಲ್‌ಗ‌ಳು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಇಂದಿರಾ ಕ್ಯಾಂಟೀನ್‌' ಯೋಜನೆಗೆ ಆಹಾರ ಪೂರೈಸಲು ಹೊಟೇಲ್‌ ಉದ್ಯಮ, ಪ್ರತಿಷ್ಠಿತ ಸಂಸ್ಥೆಗಳು ಹೊಟೇಲ್‌ಗ‌ಳು ಟೆಂಡರ್‌ ಸಲ್ಲಿಸಿವೆ. ಪಾಲಿಕೆ 198 ವಾರ್ಡ್‌ಗಳಲ್ಲಿ ನಿರ್ಮಿಸುತ್ತಿರುವ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಟೆಂಡರ್‌ ಅವಧಿ ಮುಗಿದ್ದು, ಈಗಾಗಲೇ ಅಡಿಗಾಸ್‌, ಸಾಗರ್‌ ಸೇರಿ ಹೊಟೇಲ್‌ ಸಮೂಹಗಳು ಆಹಾರ ಪೂರೈಕೆಗೆ ಬಿಡ್‌ ಸಲ್ಲಿಸಿದ್ದು ಬಿಡ್‌ ಮೊತ್ತ ಪರಿಶೀಲಿಸಿದ ಅನಂತರ ಯಾರಿಗೆ ಆಹಾರ ಪೂರೈಕೆ ಹೊಣೆ ನೀಡಬೇಕು ಎಂಬುದು ತೀರ್ಮಾನವಾಗಲಿದೆ.

ಪ್ರತಿ ವಾರ್ಡ್‌ನಲ್ಲಿ ನಿತ್ಯ 6,400ರಿಂದ 6,500 ಜನರಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಪೂರೈಸಬೇಕಿದ್ದು, ಅದರಂತೆ ನಿತ್ಯ 1.30 ಲಕ್ಷ ಜನರಿಗೆ ಆಹಾರ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಆಹಾರ ಪೂರೈಕೆ ಮಾಡುವ ಹೊಣೆಯನ್ನು ಒಂದೇ ಸಂಸ್ಥೆಗೆ ನೀಡದೆ ಪ್ರತಿ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಒಬ್ಬರಂತೆ ನಿಗದಿ ಮಾಡಲು ಅಧಿಕಾರಿಗಳು ತೀರ್ಮಾನಿಸಿದ್ದು, ಬಿಡ್‌ ಸಲ್ಲಿಸಿರುವ ಎಲ್ಲ ಹೊಟೇಲ್‌ದಾರರಿಗೆ ಅವಕಾಶ ದೊರೆಯುವ ಸಾಧ್ಯತೆಯಿದ್ದು, ಉಳಿದ 5 ಕ್ಷೇತ್ರಗಳಿಗೆ ಮಹಿಳಾ ಸ್ವ-ಸಹಾಯ ಸಂಘಗಳು ಆಹಾರ ಪೂರೈಕೆ ಮಾಡಲಿವೆ.

Back to Top