CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗುಪ್ತಚರ ಮುಖ್ಯಸ್ಥ ಎಂ.ಎನ್‌. ರೆಡ್ಡಿ ವರ್ಗಾವಣೆ

ಬೆಂಗಳೂರು: ಕಾರಾಗೃಹ ಡಿಜಿ ಸತ್ಯನಾರಾಯಣರಾವ್‌ ಹಾಗೂ ಡಿಐಜಿ ರೂಪಾ ವರ್ಗಾವಣೆ ಬೆನ್ನಲ್ಲೇ ಮಂಗಳೂರು ಕೋಮುಗಲಭೆ ಮತ್ತು ಕಾರಾಗೃಹ ಅಕ್ರಮದ ಮಾಹಿತಿ ಸಂಗ್ರಹಿಸುವಲ್ಲಿ ವಿಫ‌ಲರಾದ ರಾಜ್ಯ ಗುಪ್ತಚರ ವಿಭಾಗದ ಮುಖ್ಯಸ್ಥ ಎಂ.ಎನ್‌.ರೆಡ್ಡಿ ಅವರನ್ನು ಸಹ ಎತ್ತಂಗಡಿ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಹುದ್ದೆಯನ್ನು ಡಿಜಿ ಹುದ್ದೆಗೆ ಮೇಲ್ದರ್ಜೆಗೇರಿಸಿ ಈ ಸ್ಥಾನಕ್ಕೆ ಎಂ.ಎನ್‌.ರೆಡ್ಡಿ ಅವರನ್ನು ನಿಯೋಜಿಸಲಾಗಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಕೊಲೆಯ ಅನಂತರ ಮಂಗಳೂರಿನಲ್ಲಿ ಉಂಟಾದ ಕೋಮು ಗಲಭೆಯ ಮುನ್ಸೂಚನೆ ಪಡೆಯುವಲ್ಲಿ ಎಂ.ಎನ್‌.ರೆಡ್ಡಿ ವಿಫ‌ಲರಾಗಿದ್ದರು ಎನ್ನಲಾಗಿದೆ.

Back to Top