CONNECT WITH US  

ಪ್ರತ್ಯೇಕ ಧ್ವಜ: ಸರ್ಕಾರದ ವಿರುದ್ಧ ಜಗ್ಗೇಶ್‌ ಕೆಂಡಾಮಂಡಲ

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆಪ್ರತ್ಯೇಕ ಧ್ವಜ ರೂಪಿಸಿ, ಅದಕ್ಕೆ ಕಾನೂನು ಮಾನ್ಯತೆ ನೀಡುವ ಸಲುವಾಗಿ ಪರಾಮರ್ಶಿಸಲು ರಾಜ್ಯ ಸರ್ಕಾರ, ಒಂಬತ್ತು ಮಂದಿಯ ಸಮಿತಿ ರಚಿಸಿ ರಾಷ್ಟ್ರವ್ಯಾಪಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಟ, ಬಿಜೆಪಿ ನಾಯಕ ಜಗ್ಗೇಶ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಟ್ವೀಟರ್‌ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಜಗ್ಗೇಶ್‌ 'ಕನ್ನಡದ ಬಾವುಟ ವಿಷಯತಂದು ಕನ್ನಡಿಗರಿಗೆ ಕೇಂದ್ರದ ಮೇಲೆ ಕೋಪತರಿಸುವ ಹುನ್ನಾರ ಭಾಸವಾಗುತ್ತಿದೆ!ಅದು ಚುನಾವಣೆ ಹತ್ತಿರ ಇರಬೇಕಾದರೆ ನಡೆಯುವ ವ್ಯೊಹ!'ಎಂದಿದ್ದಾರೆ. 

'ತಮ್ಮ ಸರಕಾರದ ಹುಳುಕು ಮುಚ್ಚಲು! ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ಭಾವನೆಯ ಕನ್ನಡದ ಬಾವುಟ ಬಳಸುತ್ತಿದ್ದಾರೆ! ಇದು ಚಾಣಿಕ್ಯ ತಂತ್ರದ ರಾಜಕೀಯ ದಾಳ!'

'ತಾಯಿಚಾಮುಂಡಿ ನಾಡದೇವತೆ ಅವಳ ಹಣೆಯ ಕೆಂಪು ಕುಂಕುಮ ಗಧ್ಧದ ಮೇಲಿನ ಹರಿಶಿನ ತೆಗೆದು ಮಾಡಿದ್ದೆ ಕನ್ನಡದ ದ್ವಜ "ಹಳದಿ ಕೆಂಪು"ಹೆಮ್ಮೆಯ ಕನ್ನಡಿಗರ ಬಾವುಟ!ಸಿರಿಗನ್ನಡಂ ಗೆಲ್ಗೆ'

'ಹೆಗಲ ಮೇಲೆ ಕನ್ನಡ ಶಾಲು ಹಾಕಿಕೊಳ್ಳುವ ಮೊದಲು ಕನ್ನಡಕ್ಕೆ ತನ್ನಜೀವನ ಅರ್ಪಿಸಿ ಮಕ್ಕಳನ್ನು ಕಳೆದುಕೊಂಡು ಬರಿಗೈಯಲ್ಲಿ ಅಂತ್ಯಕಂಡ ಮಾ.ರಾಮಮೂರ್ತಿ ಚರಿತ್ರೆ ಓದಿ.#ಕನ್ನಡಿಗ,'ಎಂದು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

Trending videos

Back to Top