ಕೊಡಗು ಜಿಲ್ಲೆಯಲ್ಲಿ ಶೇ. 26ರಷ್ಟು ಮಳೆ ಕೊರತೆ


Team Udayavani, Aug 4, 2017, 6:25 AM IST

male-korate.jpg

ಮಡಿಕೇರಿ : ಹಿಂದೆ ಆಷಾಡ ಮಾಸವೆಂದರೆ ಮಳೆಯ ಸಂಭ್ರಮವಿರುತ್ತಿತ್ತು. ಆಷಾಡ ಮಾಸದಲ್ಲಿ ಮನೆಯಲ್ಲಿದ್ದ ಧವಸ ಧಾನ್ಯವೆಲ್ಲ ಖಾಲಿಯಾಗಿ ಶ್ರಾವಣ ಮಾಸದ ಆರಂಭದಲ್ಲಿ ರಾಗಿ, ಜೋಳ, ಕಂಬು, ನವಣೆ, ಅಲಸಂದೆ ಜೊತೆಗೆ ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ, ಕಡ್ಲೆಕಾಯಿ ಹೀಗೆ ನಾನಾ ರೀತಿಯ ಹೊಸ ಬೆಳೆಗಾಗಿ ಕಾಯುತ್ತಿದ್ದರು. ಜುಲೈ ಅಂತ್ಯ ಹಾಗೂ ಆಗಸ್ಟ್‌ ಆರಂಭದ ಅವಧಿಯಲ್ಲಿ ಹೊಲದಲ್ಲಿ ಬೆಳೆಗಳನ್ನು ನೋಡುವುದೇ ಒಂದು ರೀತಿ ಸಂತಸವಾಗುತ್ತಿತ್ತು.   
ಆದರೆ  ಇದು ಒಂದೆಡೆಯಾದರೆ, ಮಲೆನಾಡು ಕೊಡಗು ಜಿಲ್ಲೆಯಲ್ಲಿಯೇ ಕಳೆದ ನಾಲ್ಕು ವರ್ಷಗಳಿಂದ ಸರಾಸರಿ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬಂದಿರುವುದು ಕಾವೇರಿ ಕಣಿವೆಯ ಜನತೆಯಲ್ಲಿ ಆತಂಕಕ್ಕೆ ದೂಡಿದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ವಾಡಿಕೆ ಮಳೆಯಾದರೆ ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ಭರ್ತಿಯಾಗುತ್ತಿದ್ದವು, ಆದರೆ ಹಾರಂಗಿ ಜಲಾಶಯ ಹೊರತುಪಡಿಸಿ  ಕೃಷರಾಜ ಸಾಗರ, ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿಯಾಗದಿರುವುದು ಎಲ್ಲರನ್ನೂ ಚಿಂತೆಗೆ ದೂಡಿದೆ. ಜುಲೈ ಅಂತ್ಯ ಹಾಗೂ ಆಗಸ್ಟ್‌ ಆರಂಭದಲ್ಲಿ ಹಾಗಾಗ ಮಳೆ ಮತ್ತು ಮೊಡಕವಿದ ವಾತಾವರಣವಿದೆಯೇ ಹೊರತು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ, ಇದರಿಂದ ಮುಂದಿನ ದಿನಗಳಲ್ಲಿ  ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವುದಾದರೂ ಹೇಗೆ ಎಂಬುದು ಕಾಡುತ್ತಿದೆ.    
ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿನ ಸರಾಸರಿ ಮಳೆಯ ಪ್ರಮಾಣವನ್ನು ಅವಲೋಕನ ಮಾಡಿದಾಗ ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1669.86 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಜುಲೈ ಅಂತ್ಯದವರೆಗೆ 1224.43 ಮಿ.ಮೀ.ಮಳೆಯಾಗಿದ್ದು, ಶೇ.73.33 ರಷ್ಟು ಮಳೆಯಾಗಿದೆ. 2016ರಲ್ಲಿ 1184.31 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 1544.27 ಮಿ.ಮೀ. ಮಳೆಯಾಗಿತ್ತು.  ಒಟ್ಟಾರೆ ಜಿಲ್ಲೆಯಲ್ಲಿ ಶೇ. 26 ಮಳೆ ಕೊರತೆ ಉಂಟಾಗಿದೆ. 
ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ ತಾಲ್ಲೂಕಿನಲ್ಲಿ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1992.30ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಜುಲೈ, 31ರ ವರೆಗೆ 1683.75 ಮಿ.ಮೀ.ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 1759.32 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 2286.70 ಮಿ.ಮೀ.ಮಳೆಯಾಗಿತ್ತು. ಒಟ್ಟಾರೆ ತಾಲ್ಲೂಕಿನಲ್ಲಿ ಈ ಬಾರಿ ಶೇ 84.51 ರಷ್ಟು ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1294 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಇಲ್ಲಿಯವರೆಗೆ 952.55 ಮಿ.ಮೀರಷ್ಟು ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 912.60 ಮಿ.ಮೀ.ಮಳೆಯಾಗಿದೆ. ಹಾಗೆಯೇ 2015ರ ಇದೇ ಅವಧಿಯಲ್ಲಿ 1059.41 ಮಿ.ಮೀ. ಮಳೆಯಾಗಿತ್ತು. ತಾಲ್ಲೂಕಿನಲ್ಲಿ ಶೇ.73.61ರಷ್ಟು ಮಳೆಯಾಗಿದೆ. 
ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1723.30 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಇಲ್ಲಿಯವರೆಗಿನ ಮಳೆ 1036.98 ಮಿ.ಮೀ.ರಷ್ಟು ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 881.05 ಮಿ.ಮೀ. ಮಳೆಯಾಗಿದೆ. ಹಾಗೆಯೇ 2015ರ ಇದೇ ಅವಧಿಯಲ್ಲಿ 1286.68 ಮಿ.ಮೀ. ಮಳೆಯಾಗಿ ಶೇ. 60.17ರಷ್ಟು ಮಾತ್ರ ಮಳೆಯಾಗಿದೆ. 
ಒಟ್ಟಾರೆ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು, ಆದರೆ ಕಳೆದ ಮೂರು ವರ್ಷಗಳಲ್ಲಿ ಮಳೆಯ ಕೊರತೆ ಉಂಟಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
 

ಟಾಪ್ ನ್ಯೂಸ್

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.