CONNECT WITH US  

ಡಿಕೆಶಿ ನಿವಾಸಕ್ಕೆ ಕೈ ನಾಯಕರ ದಂಡು; ಹೈಕಮಾಂಡ್‌ ಕರೆದ್ರೆ ದೆಹಲಿಗೆ 

ಬೆಂಗಳೂರು : ಐಟಿ ದಾಳಿಯಿಂದ ಕಂಗಾಲಾಗಿರುವ ಸಚಿವ ಡಿ.ಕೆ.ಶಿವಕುಮಾರ್‌ ಅವರ ನಿವಾಸಕ್ಕೆ ಭಾನುವಾರ ಕಾಂಗ್ರೆಸ್‌ ಪಕ್ಷದ ಹಲವು  ನಾಯಕರು ಆಗಮಿಸಿ ಧೈರ್ಯ ತುಂಬಿದರು. 

ಸದಾಶಿವ ನಗರದ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‌ಕರ್‌, ಸಚಿವ ಎಂ.ಬಿ.ಪಾಟೀಲ್‌, ಮೇಯರ್‌ ಪದ್ಮಾವತಿ ಸೇರಿದಂತೆ ಹಲವು ಸಚಿವರು ಭೇಟಿ ನೀಡಿ ಮಾತುಕತೆ ನಡೆಸಿದರು. 

ಪರಮೇಶ್ವರ್‌ ಅವರಿಗೆ ಶಿವಕುಮಾರ್‌ ಅವರು ಹೂಗುಚ್ಛ ನೀಡಿ ಸ್ವಾಗತಿಸಿ ಕೆಲ ಹೊತ್ತು ಮಾತುಕತೆ ನಡೆಸಿದರು. 

ಶಿವಕುಮಾರ್‌ ಅವರ ತಾಯಿ ಗೌರಮ್ಮ ಅವರೂ ಆಗಮಿಸಿದ್ದಾರೆ. ಮನೆಯ ಹೊರಗೆ ನೂರಾರು ಬೆಂಬಲಿಗರು ಶಿವಕುಮಾರ್‌ ಅವರ ಭೇಟಿಗಾಗಿ ಕಾದುಕುಳಿತಿದ್ದಾರೆ. 

ಇದೇ ವೇಳೆ ಹೈಕಮಾಂಡ್‌ ಕರೆದರೆ ಮಾತ್ರ ದೆಹಲಿಗೆ ತೆರಳುವುದಾಗಿ ಡಿ.ಕೆ.ಶಿವಕುಮಾರ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

Trending videos

Back to Top