ಪರಸತಿ ಪ್ರಸಂಗವೂ ಕೌಟುಂಬಿಕ ದೌರ್ಜನ್ಯ; ಹೈಕೋರ್ಟ್‌

Team Udayavani, Aug 16, 2017, 6:00 AM IST

High-court-Karnataka.jpg

ಬೆಂಗಳೂರು: ಮೊದಲನೇ ಹೆಂಡತಿ ಜತೆ ಕಾನೂನು ಬದ್ಧವಾಗಿ ವೈವಾಹಿಕ ಸಂಬಂಧ ಕಳೆದುಕೊಳ್ಳದೇ, ಬೇರೊಬ್ಬ ಮಹಿಳೆ ಜತೆಗೆ ವೈವಾಹಿಕ ತರಹದ ಜೀವನ ನಡೆಸುವುದು ಮೊದಲ ಪತ್ನಿಗೆ ಕೌಟುಂಬಿಕ ದೌರ್ಜನ್ಯ ನೀಡಿದಂತೆಯೇ ಆಗಲಿದೆ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಈ ಸಂಬಂಧ ಗಂಡನಿಂದ ಮೂರು ದಶಕಗಳ ಕಾಲ ದೂರವಾಗಿದ್ದ  ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಿ ಜೀವನಾಂಶ ಮತ್ತು ಪರಿಹಾರ ನೀಡಲು ಆದೇಶಿಸಿದೆ. ಮೌಖೀಕವಾಗಿ ವೈವಾಹಿಕ ಜೀವನದಿಂದ ದೂರವಾದ ಬಳಿಕ ನಿಗದಿತ ಅವಧಿಯಲ್ಲಿ ಜೀವನಾಂಶ ಕೋರಿಲ್ಲ ಎಂದು ಮೊದಲ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸಿದ್ದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಗೆ ಹೈಕೋರ್ಟ್‌ ಕೌಟುಂಬಿಕ ದೌರ್ಜನ್ಯ ಕಾಯ್ದೆ ಬಿಸಿ ಮುಟ್ಟಿಸಿದ್ದು, ಮೊದಲ ಪತ್ನಿಗೆ ಜೀವನಾಂಶ ಹಾಗೂ ಪರಿಹಾರ ಕೊಡುವಂತೆ ತೀರ್ಪು ನೀಡಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ನಿವೃತ್ತ ಸರ್ಕಾರಿ ಅಧಿಕಾರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾ. ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ವ್ಯಕ್ತಿಯೊಬ್ಬ ಮೊದಲನೇ ಪತ್ನಿಯನ್ನು ಕಡೆಗಣಿಸಿ, ಬೇರೆ ಮಹಿಳೆ (ಎರಡನೇ ಪತ್ನಿ) ಜೊತೆ ವಾಸಿಸುವುದೂ ಕೌಟುಂಬಿಕ ದೌರ್ಜನ್ಯ ಆಗಲಿದೆ. ಜೊತೆಗೆ ನಿಗದಿತ ಅವಧಿಯಲ್ಲಿ ಪತ್ನಿ ಜೀವನಾಂಶ ಕೋರಿಲ್ಲ ಎಂಬ ಕಾರಣವನ್ನಿಟ್ಟುಕೊಂಡು, ಜೀವನಾಂಶ ಮತ್ತು ಪರಿಹಾರ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲವೆಂದು ತೀರ್ಪಿನಲ್ಲಿ ತಿಳಿಸಿದೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪತಿಯಿಂದ ಪರಿತ್ಯಕ್ತಗೊಂಡ 30 ವರ್ಷಗಳ ಬಳಿಕ ಜೀವನಾಂಶ ಕೋರಿದ್ದ ಮಹಿಳೆಯೊಬ್ಬರು, ಪತಿಯಿಂದ ಮಾಸಿಕ 5000 ರೂ. ಜೀವನಾಂಶ ಹಾಗೂ 50 ಸಾವಿರ ರೂ. ಪರಿಹಾರ ಪಡೆಯುವಲ್ಲಿ ಸಫ‌ಲರಾಗಿದ್ದಾರೆ. ಮೊದಲ ಪತ್ನಿಯನ್ನು ಕಡೆಗಣಿಸಿ ಎರಡನೇ ವಿವಾಹವಾದ ಬಳಿಕ ಮೊದಲ ಪತ್ನಿಗೆ ಸೂಕ್ತ ಪರಿಹಾರ ಒದಗಿಸಿಲ್ಲ. ತನ್ನ ಸೇವಾವಧಿಯ ದಾಖಲೆಗಳಲ್ಲಿ ಮೊದಲ ಪತ್ನಿ ಬದುಕಿರುವಾಗಲೇ, ಕಾನೂನು ಬದ್ಧವಾಗಿ ವಿಚ್ಛೇದನ ಪಡೆಯದೆ ಎರಡನೇ ಪತ್ನಿಯ ಹೆಸರನ್ನು ಉಲ್ಲೇಖೀಸಿದ್ದಾರೆ. ಇದು ಕೂಡ ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೆಕ್ಷನ್‌ (3)ರ ಅಡಿಯಲ್ಲಿ ಆರ್ಥಿಕ ನಿಂದನೆಯಾಗಲಿದೆ. ಅಲ್ಲದೆ ಎರಡನೇ ಪತ್ನಿ ಹಾಗೂ ಮಕ್ಕಳ ಜೊತೆ ಆರಾಮದಾಯಕ ಜೀವನ ನಡೆಸುತ್ತಿರುವುದು ಸೆಕ್ಷನ್‌ 3(ಎ) ಅನ್ವಯ ಭಾವನಾತ್ಮಕ ನಿಂದನೆಯೂ ಆಗಲಿದೆ. ಮಹಿಳೆಯ ಜೀವನ ಕೊನೆಗಾಲದಲ್ಲಿ ಮಾನಸಿಕ ಹಾಗೂ ದೈಹಿಕ ಘಾಸಿಗೊಳಗಾಗುವಂತೆ ಮಾಡಲಿದೆ. ಇದು ಕೌಟುಂಬಿಕ ದೌರ್ಜನ್ಯದ ಮತ್ತೂಂದು ಸ್ವರೂಪ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಈ ಅಂಶಗಳ ಆಧಾರದಲ್ಲಿ ಅರ್ಜಿದಾರ ತಪ್ಪಿತಸ್ಥ ಎಂದು ಪರಿಗಣಿತನಾಗುತ್ತಾನೆ. ಅಲ್ಲದೆ ನಿಗದಿತ ಕಾಲಮಿತಿಯಲ್ಲಿ ಜೀವನಾಂಶ ಕೋರಿಲ್ಲ ಹಾಗೂ ಎರಡನೇ ಮದುವೆ ಆಗಿದ್ದೇನೆ ಎಂಬುದಕ್ಕೆ ಸಾಬೀತುಪಡಿಸಲು ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಆತ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಈ ಅಂಶಗಳು ಮಹಿಳೆಯ ಹಕ್ಕನ್ನು ರಕ್ಷಿಸಲಿವೆ ಎಂದು ನ್ಯಾಯಪೀಠ ತಿಳಿಸಿದೆ. ಅಧೀನ ನ್ಯಾಯಾಲಯ ಆದೇಶ ರದ್ದು ಕೋರಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಆತನ ಮೊದಲ ಪತ್ನಿಯ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿದೆ.

ಪ್ರಕರಣ ಏನು?: ಕಳೆದ ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನ ಸುನೀತಾ (54) ಹಾಗೂ ಕಂದಾಯ ಇಲಾಖೆ ಇನ್ಸ್‌ಪೆಕ್ಟರ್‌ ಆಗಿದ್ದ ಬೆಳಗಾವಿ ಮೂಲದ ಪ್ರಮೋದ್‌ (60)( ಇಬ್ಬರ ಹೆಸರೂ ಬದಲಿಸಲಾಗಿದೆ) ಮದುವೆಯಾಗಿದ್ದು, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಸುನೀತಾ ಬೆಂಗಳೂರಿಗೆ ಹಿಂತಿರುಗಿ ತವರು ಮನೆಯಲ್ಲಿ ವಾಸಿಸುತ್ತಾರೆ. ಬಳಿಕ ಆಕೆಗೆ ಮಗಳಾಗಿದ್ದು, ಆಕೆಗೂ ಮದುವೆ ಮಾಡಿ ಅಳಿಯ ಹಾಗೂ ಮಗಳ ಜೊತೆಯಲ್ಲಿಯೇ ವಾಸಿಸುತ್ತಾರೆ.

ಮೊದಲ ಪತ್ನಿ ಸುನೀತಾ ಬಿಟ್ಟು ಹೋದ ಬಳಿಕ  ಪ್ರಮೋದ್‌ ಎರಡನೇ ಮದುವೆ  ಮಾಡಿಕೊಂಡಿದ್ದ. ಇಬ್ಬರು ಮಕ್ಕಳ ಜೊತೆ ಅಲ್ಲಿಯೇ ವಾಸಿಸುತ್ತಿದ್ದು, 2016ರಲ್ಲಿ  ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಈ ಮಧ್ಯೆ ಪತಿಯಿಂದ ಪರಿತ್ಯಕ್ತಗೊಂಡು ಮೂವತ್ತು ವರ್ಷಗಳ ಬಳಿಕ ಪತಿಯಿಂದ ಜೀವನಾಂಶ ಕೊಡಿಸುವಂತೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ ಅರ್ಜಿದಾರ ಮಹಿಳೆಗೆ ಮಾಸಿಕ 10, ಸಾವಿರ ರೂ. ಜೀವನಾಂಶ, 1ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಬೆಂಗಳೂರಿನಲ್ಲಿ ಬಾಡಿಗೆ ಮನೆ ವಾಸಕ್ಕೆ ಮಾಸಿಕ 1 ಸಾವಿರ ರೂ ನೀಡಬೇಕು ಎಂದು ಪ್ರತಿವಾದಿ  ಪ್ರಮೋದ್‌ಗೆ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಪ್ರಮೋದ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಮೊದಲ ಪತ್ನಿಗೆ ಮಾಸಿಕ 5 ಸಾವಿರ ರೂ. ಜೀವನಾಂಶ ಹಾಗೂ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶ ರದ್ದುಪಡಿಸಿ ಜೀವನಾಂಶ ಹಾಗೂ ಪರಿಹಾರ ಮೊತ್ತ ಕಡಿಮೆಗೊಳಿಸುವಂತೆ ಪ್ರಮೋದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರೆ, ಮೊದಲ ಪತ್ನಿ ಸುನೀತಾ, ಜೀವನಾಂಶ ಹಾಗೂ ಪರಿಹಾರ ಮೊತ್ತ ಹೆಚ್ಚಿಸುವಂತೆ ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಮಹಿಳೆಯ ವಾದವೇನು?
ಪತಿ ಮದುವೆಯಾದ ಬಳಿಕ  ಸರಿಯಾಗಿ ನಡೆಸಿಕೊಂಡಿಲ್ಲ. ನನ್ನನ್ನು ಕಡೆಗಣಿಸಿ ಬೇರೊಂದು ಮದುವೆ ಮಾಡಿಕೊಂಡಿದ್ದಾರೆ. ಸದ್ಯ ನಿವೃತ್ತಿ ವೇತನ, ಕೃಷಿ ಭೂಮಿ, ಎರಡನೇ ಪತ್ನಿ ವೇತನ, ಮಕ್ಕಳ ದುಡಿಮೆ ಸೇರಿ ತಿಂಗಳಿಗೆ 1 ಲಕ್ಷ ರೂ.ಗಳಿಗೂ ಅಧಿಕ ಆದಾಯವಿದೆ. ಸದ್ಯ ಮಗಳು ಹಾಗೂ ಅಳಿಯನ ಮನೆಯಲ್ಲಿ ವಾಸಿಸುತ್ತಿದ್ದು, ಪ್ರತ್ಯೇಕವಾಗಿ ಜೀವನ ನಡೆಸಲು ಪ್ರತಿ ತಿಂಗಳ ಊಟ, ಬಟ್ಟೆ, ವೈದ್ಯಕೀಯ ಖರ್ಚುಗಳು ಸೇರಿ 20 ಸಾವಿರ ರೂ ಜೀವನಾಂಶ ಕೊಡಿಸಬೇಕು ಎಂಬುದು ಮಹಿಳೆಯ ವಾದವಾಗಿತ್ತು.

– ಮಂಜುನಾಥ್‌ ಲಘುಮೇನಹಳ್ಳಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.