CONNECT WITH US  

ಬೆಂಗಳೂರಿಗರು ಮಳೆಗೆ ಮತ್ತೆ ಕಂಗಾಲು; ಜಾರ್ಜ್ ಗೆ ರಸ್ತೇಲಿ ತರಾಟೆ

ಬೆಂಗಳೂರು: ಭಾರೀ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ತತ್ತರಿಸಿ ಹೋಗಿದೆ. ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿತ್ತು. ಏತನ್ಮಧ್ಯೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಥಣಿಸಂದ್ರ ತೂಬಾ ಲೇಔಟ್‍, ಸಚಿವ ಕೆಜೆ ಜಾರ್ಜ್ ಅವರ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ನಂದಗೋಕುಲ ಲೇಔಟ್ ಸಂಪೂರ್ಣ ಜಲಾವೃತವಾಗಿದೆ. ಮನೆಗಳಿಗೆ ನೀರು ತುಂಬಿದ್ದರಿಂದ ಜನರು ರಾತ್ರಿ ಇಡೀ ನೀರನ್ನು ಹೊರ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ.

ನಾವ್ ಸಾಯ್ತಾ ಇದ್ರೆ ನೀವು ಈಗ ಬರ್ತೀರಾ? ಜಾರ್ಜ್ ಗೆ ತರಾಟೆ:

ಊಟ, ನಿದ್ದೆ ಇಲ್ಲದೆ ರಾತ್ರಿ ಇಡೀ ನಾವು ಸಾಯ್ತಾ ಇದ್ರೆ, ನೀವು ಈಗ ಬರ್ತಾ ಇದ್ದೀರಾ ಎಂದು ನಂದಗೋಕುಲ ಲೇಔಟ್ ನ ಮಹಿಳೆಯರು ನಡುರಸ್ತೆಯಲ್ಲಿ ಸಚಿವ ಕೆಜೆ ಜಾರ್ಜ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.


Trending videos

Back to Top