CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಾಹುಲ್ ಪ್ರಧಾನಿ ಆಗೋದು ತಿರುಕನ ಕನಸು, ಮೋದಿಯದ್ದು ?ಏಟು, ತಿರುಗೇಟು 

ಬಾಗಲಕೋಟೆ/ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಆಗೋದು ತಿರುಕನ ಕನಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಬುಧವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚಿಕ್ಕಮಕ್ಕಳ ಮನಸ್ಥಿತಿ ಇರುವುದರಿಂದ ರಾಹುಲ್ ಏನೇನೋ ಹೇಳುತ್ತಿದ್ದಾರೆ ಎಂದರು.

ನಾನು ಪ್ರಧಾನಿ ಹುದ್ದೆಗೆ ಸಿದ್ಧನಿದ್ದೇನೆ, ಅವಕಾಶ ಬಂದರೆ ಒಪ್ಪಿಕೊಳ್ಳುತ್ತೇನೆ. ಆದರೆ ಕಾಂಗ್ರೆಸ್ ನಲ್ಲಿ ಸಂಘಟನಾ ವ್ಯವಸ್ಥೆ ಇದ್ದು, ಆರಿಸಿ ಬರಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಕ್ಯಾಲಿಫೋರ್ನಿಯಾದ ಬರ್ಕ್ ಲೀ ಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಭಾರತಕ್ಕೆ 70 ವರ್ಷವಾದ ನೆನಪಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯವ್ಯಕ್ತಪಡಿಸಿದ್ದರು.

ಮೋದಿ ಪ್ರಧಾನಿ ಆಗೋದು ಕೂಡಾ ತಿರುಕನ ಕನಸು; ಟಿಬಿ ಜಯಚಂದ್ರ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಆಗೋದು ತಿರುಕನ ಕನಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಟಿಬಿ ಜಯಚಂದ್ರ, ಮುಂದಿನ ಬಾರಿ ನರೇಂದ್ರ ಮೋದಿ ಅವರು ಪ್ರಧಾನಿ ಆಗೋದು ಕೂಡಾ ತಿರುಕನ ಕನಸು ಎಂದು ತಿರುಗೇಟು ನೀಡಿದ್ದಾರೆ.

Back to Top