CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮೂರು ಬಾರಿ ಗೌರಿ ಮನೆಗೆ ಬಂದಿದ್ದ ಹಂತಕ?

ಬೆಂಗಳೂರು: ಗೌರಿ ಹತ್ಯೆಗೂ ಮೊದಲು ಹಂತಕರು 3 ಬಾರಿ ಗೌರಿ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಈ ಮೂಲಕ ತನಿಖಾ ತಂಡಕ್ಕೆ ಮಹತ್ವದ ಸುಳಿವು ಸಿಕ್ಕಿದೆ. ಸಿಸಿ ಟಿವಿಯಲ್ಲಿ ಸೆರೆ ಯಾಗಿರುವ ದೃಶ್ಯಾವಳಿ ಪ್ರಕಾರ, ಆರೋಪಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅನುಮಾನಾಸ್ಪದವಾಗಿ ಗೌರಿ ಮನೆ ಕಡೆ ಗಮನಿಸಿ ನಾಪತ್ತೆಯಾಗಿದ್ದಾನೆ. ನಂತರ ರಾತ್ರಿ 7.15ರ ಸುಮಾರಿಗೆ ಮತ್ತೂಮ್ಮೆ ಬಂದು ನೋಡಿದ್ದಾನೆ. ಇದಾಗಿ ಒಂದು ಗಂಟೆ ನಂತರ, ಅಂದರೆ 8.10 ನಿಮಿಷಕ್ಕೆ ಸರಿಯಾಗಿ ಗೌರಿ ಅವರನ್ನು ಹಿಂಬಾಲಿ ಸಿಕೊಂಡು ಬಂದಿದ್ದಾನೆ.

ಬಳಿಕ ಗೌರಿ ಅವರು ಕಾರು ಇಳಿದು ಗೇಟ್‌ ತೆರೆದು ಒಳ ಹೋಗುತ್ತಿದ್ದಂತೆ ಗುಂಡಿನ ದಾಳಿ ನಡೆಸಿ ದ್ದಾನೆ. ನಂತರ ನಿಧಾನ ವಾಗಿಯೇ ನಡೆದು ಮುಂದೆ ನಿಂತಿದ್ದ ತನ್ನ ಸಹಚರನ ಜತೆ ಬೈಕ್‌ನಲ್ಲಿ ಪರಾರಿ ಯಾಗಿದ್ದಾನೆ. ಈ ಕೃತ್ಯದ ಮಾದರಿ ಗಮನಿಸಿದರೆ ಹೊಂಚು ಹಾಕಿ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಲೆನೋವೋ ಮೊಬೈಲ್‌ ಪತ್ತೆ: ಗೌರಿ ಮನೆ ಪಕ್ಕದ ಖಾಲಿ ಜಾಗದಲ್ಲಿ ಲೆನೋವೋ ಮೊಬೈಲ್‌ ಪತ್ತೆಯಾಗಿದೆ. ಆದರೆ, ಈ ಮೊಬೈಲ್‌ನಲ್ಲಿ ಸಿಮ್‌ ಕಾರ್ಡ್‌ ಇಲ್ಲ. ಮಳೆಯಿಂದ ಸಂಪೂರ್ಣವಾಗಿ ನೆನೆದಿದ್ದು, ಹಾಳಾಗಿದೆ. ಯಾವುದೇ ಮಾಹಿತಿ ಇರುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಪೊಲೀಸ್‌ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿಗಳಿಗೆ ಇದನ್ನು ನೀಡಿದ್ದು, ಮೊಬೈಲ್‌ ತೆರೆಯುವಂತೆ ಸೂಚಿಸಲಾಗಿದೆ.

ಈ ಮೊಬೈಲ್‌ ಹಂತಕರದ್ದೇ?
ಅಥವಾ ದುರಸ್ಥಿಗೊಂಡಿರುವ ಮೊಬೈಲ್‌ ಬಳಕೆ ಮಾಡಲು ಸಾಧ್ಯವಾಗದೆ ಸಾರ್ವ ಜನಿಕರೇ ಎಸೆದು ಹೋಗಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮೊಬೈಲ್‌ ತೆರೆಯುವವರೆಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಮೊಬೈಲ್‌ನಲ್ಲಿ ಸಂಪೂರ್ಣವಾಗಿ ನೀರು ಸೇರಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Back to Top