ಕಣಜದಲ್ಲಿ ಕಾಯ್ದೆಗೆ ಕನ್ನಡ ರೂಪ

Team Udayavani, Sep 14, 2017, 6:00 AM IST

GOVT-KAR-CE.jpg

ಬೆಂಗಳೂರು: ಕಾನೂನುಗಳನ್ನು ಜನಸಾಮಾನ್ಯರು ಓದಿ ಅರ್ಥೈಸಿಕೊಂಡು ಪಾಲಿಸಿದಾಗ ಮಾತ್ರ ಕಾನೂನು ಆಶಯ ಸಂಪೂರ್ಣ ಈಡೇರಿದಂತೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿನಿಯಮಗಳ ಕನ್ನಡ ಅವತರಣಿಕೆಯನ್ನು “ಕಣಜ’ ಜಾಲತಾಣದಲ್ಲಿ ಒಂದೇ ಕ್ಲಿಕ್‌ನಲ್ಲಿ ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರದ 112 ಅಧಿನಿಯಮಗಳು ಮತ್ತು ರಾಜ್ಯ ಸರ್ಕಾರದ 121 ಅಧಿನಿಯಮಗಳು ಸೇರಿ ಒಟ್ಟು 233 ಅಧಿನಿಯಮಗಳನ್ನು “ಕಣಜ’ ವೆಬ್‌ಸೈಟ್‌ನಲ್ಲಿ ಪಿಡಿಎಫ್ ಮಾದರಿಯಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಶತಮಾನಗಳ ಹಿಂದೆ ರೂಪುಗೊಂಡ ಕಾಯ್ದೆಗಳ ಮಾಹಿತಿಯೂ ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದು ವಿಶೇಷ.

ಕನ್ನಡದಲ್ಲಿ ಎಲ್ಲ ಜ್ಞಾನ ಪ್ರಕಾರಗಳನ್ನು ಒಂದೇ ಕಡೆ ಒದಗಿಸಬೇಕೆಂಬ ಮೂಲ ಆಶಯಕ್ಕೆ ಪೂರಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ “ಕಣಜ’ದಲ್ಲಿ ಈ ಅಧಿನಿಯಮಗಳನ್ನು ಪ್ರಕಟಿಸುವ ಮೂಲಕ ಹೊಸ ಸೇವೆಗೆ ವಿಸ್ತರಿಸಿಕೊಂಡಿದೆ.
ದೇಶದ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಮತ್ತು ಪ್ರಸ್ತುತ ಜಾರಿಗೊಂಡಿರುವ ಅಧಿನಿಯಮಗಳು, ಹೊಸ ತಿದ್ದುಪಡಿಗಳನ್ನು ಕಣಜದಲ್ಲಿ ಅಳವಡಿಸಲಾಗಿವೆ. ಬಂದಿಗಳ ಅಧಿನಿಯಮ(1900), ನ್ಪೋಟಕ ಪದಾರ್ಥಗಳ ಅಧಿನಿಯಮ (1908), ಸಹಕಾರಿ ಸಂಘಗಳ ಅಧಿನಿಯಮ (1912), ಔಷಧ ಮತ್ತು ಪ್ರಸಾಧನ ಸಾಮಗ್ರಿ ಅಧಿನಿಯಮ (1940), ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ (1956), ಹಿಂದು ವಿವಾಹ ಅಧಿನಿಯಮ (1955), ಸಿನಿಮಾ ಕೆಲಸಗಾರರ ಕಲ್ಯಾಣ ನಿಧಿ ಅಧಿನಿಯಮ(1981), ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಧಿನಿಯಮಗಳ ಸಂಪೂರ್ಣ ಮಾಹಿತಿ “ಕಣಜ’ದಲ್ಲಿ ಲಭ್ಯವಿದೆ.

ಅಂತೆಯೇ ರಾಜ್ಯ ಸರ್ಕಾರದ ಕೃಷಿ, ಎಪಿಎಂಸಿ, ಪಶುರೋಗಗಳು, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ(1977), ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ, ಬ್ರೋಸ್ಟಲ್‌ ಶಾಲೆಗಳ ಅಧಿನಿಯಮ, ವಿದ್ಯುತ್ಛಕ್ತಿ, ಗೃಹ ನಿರ್ಮಾಣ ಮಂಡಳಿ ಹೀಗೆ ರಾಜ್ಯ ಸರ್ಕಾರ ಹೊರಡಿಸಿದ ಅಧಿನಿಯಮಗಳು ಕನ್ನಡದಲ್ಲಿಯೇ ಅತ್ಯಂತ ಸುಲಭವಾಗಿ ಓದುಗರಿಗೆ ಸಿಗುತ್ತಿವೆ.

ಕನ್ನಡದಲ್ಲಿ ಅಧಿನಿಯಮ
ಕೇಂದ್ರ ಸರ್ಕಾರ ಜಾರಿಗಳಿಸುವ ಕಾಯ್ದೆಗಳು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತ್ರ ಇರುತ್ತವೆ. ಇದರಿಂದ ಇಂಗ್ಲಿಷ್‌, ಹಿಂದಿ ಬರದವರು ಅಧಿನಿಯಮವನ್ನು ತಿಳಿಯಲು ಅನ್ಯರನ್ನು ಆವಲಂಬಿಸಬೇಕಾಗಿತ್ತು. ಸರ್ಕಾರಗಳ ಕಾಯ್ದೆಗಳನ್ನು ಓದುವುದೆಂದರೆ ಕಬ್ಬಿಣದ ಕಡಲೆಯಂತೆ ಭಾಸವಾಗುತ್ತಿತ್ತು. ಕನ್ನಡ ಆಡಳಿತ ಭಾಷೆಯಾಗಿದ್ದರೂ ಈ ಹಿಂದೆ ರಾಜ್ಯ ಸರ್ಕಾರದ ಅನೇಕ ಕಾಯ್ದೆಗಳು ಇಂಗ್ಲೀಷ್‌ನಲ್ಲಿ ಇರುತ್ತಿದ್ದವು (ಪ್ರಸ್ತುತ ಕನ್ನಡದಲ್ಲಿಯೇ ಅಧಿನಿಯಮಗಳನ್ನು ಜಾರಿಗೊಳ್ಳುತ್ತಿದೆ). ಇದೀಗ ಕಣಜದಲ್ಲಿ ಪ್ರಕಟಿಸಲಾಗಿರುವ ಎಲ್ಲ ಅಧಿನಿಯಮಗಳು ಕನ್ನಡ ಬಲ್ಲಂತಹ ಎಲ್ಲರಿಗೂ ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವಂತೆ ಅಪ್‌ಲೋಡ್‌ ಮಾಡಲಾಗಿದೆ.

ಅಧಿನಿಯಮಗಳ ಇಂಗ್ಲಿಷ್‌ ಪಠ್ಯ ಗೊತ್ತಿದ್ದವರಿಗೆ ಹುಡುಕಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಮೂಲ ಇಂಗ್ಲಿಷ್‌ನ ಅಕಾರಾಧಿಗಳಲ್ಲಿ ಇರುವಂತೆ ಎಲ್ಲಾ ಅಧಿನಿಯಮಗಳನ್ನು ಅಳವಡಿಸಲಾಗಿದೆ (ಅಡ್ವೋಕೆಟ್ಸ್‌ ವೆಲ್‌ಫೇರ್‌ ಫ‌ಂಡ್‌ ಆ್ಯಕ್ಟ್ – ನ್ಯಾಯವಾದಿಗಳ ಕ್ಷೇಮಾಭಿವೃದ್ಧಿ ನಿಧಿ ಅಧಿನಿಯಮ). ಹೀಗೆ ಎ ಇಂದ “ವಿ’ ವರೆಗೂ ಇರುವಂತೆ ಅಧಿನಿಯಮಗಳನ್ನು ಆಲ್ಫಾಬೆಟಿಕ್‌ ಮಾದರಿಯಲ್ಲಿ ವೆಬ್‌ಸೈಟ್‌ಗೆ ಸೇರಿಸಲಾಗಿದೆ.

ಅನುಕೂಲಗಳು
ಈ ಹಿಂದೆ ಕಾನೂನು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಜನಸಾಮಾನ್ಯರು ಸರ್ಕಾರಗಳ ಕಾಯ್ದೆಗಳನ್ನು ತಿಳಿಯಲು ಕೇಂದ್ರ ಗ್ರಂಥಾಲಯಗಳಿಗೆ ಹೋಗಬೇಕಿತ್ತು. ಕೆಲವು ಸಂದರ್ಭಗಳಲ್ಲಿ ಗೆಜೆಟಿಯರ್‌ಗಳನ್ನು ಹುಡುಕುತ್ತಾ ಅಲೆಯುವಂತ ಸ್ಥಿತಿ ಇತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಯಾ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಅಧಿಸೂಚನೆಗಳನ್ನಷ್ಟೇ ಪ್ರಕಟಿಸುತ್ತಿದ್ದವು. ಇದರಿಂದ ಎಲ್ಲ ಇಲಾಖೆಗಳ ಕಾಯ್ದೆಗಳು ಒಂದೆಡೆ ಸಿಗಲು ಸಾಧ್ಯವಾಗಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಣಜ ವೆಬ್‌ಸೈಟ್‌ನಲ್ಲಿ ಅಧಿಸೂಚನೆಗಳನ್ನು ಅಳವಡಿಸಿರುವುದು ಅತ್ಯುಪಯುಕ್ತವಾಗಿದೆ. ಮುಖ್ಯವಾಗಿ ಕನ್ನಡದಲ್ಲಿ ಕಾಯ್ದೆಗಳ ಲಭ್ಯತೆ ಖುಷಿ ಕೊಟ್ಟಿದೆ ಎನ್ನುತ್ತಾರೆ ಐದು ವರ್ಷದ ಕಾನೂನು ವಿದ್ಯಾರ್ಥಿ ವೇದಾವತಿ.

ವಿಶ್ವದೆಲ್ಲೆಡೆ ಕಣಜ ವೆಬ್‌ಸೈಟ್‌ ಮೂಲಕ ಜನಸಾಮಾನ್ಯನು ಕೂಡ ಅಧಿನಿಯಮಗಳನ್ನು ತೆರೆದು ಓದಬಹುದಾಗಿದೆ. ಈ ಮೂಲಕ ಕನ್ನಡ ಜ್ಞಾನಭಂಡಾರವಾದ ಕಣಜದಲ್ಲಿ ಹೊಸದಾಗಿ ಈ ಅಧಿನಿಯಮಗಳನ್ನು ಹಾಕುವ ಮೂಲಕ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಕಣಜ ತಂಡ ಶ್ರಮಿಸಿದೆ.

ವೆಬ್‌ಸೈಟ್‌ ವಿಳಾಸ
ಕಣಜ ವೆಬ್‌ಸೈಟ್‌ ಪ್ರವೇಶಿಸುವ ವಿಳಾಸ: www.kanaja.in/acts ಗೆ ಭೇಟಿ ನೀಡಿದ ಕೂಡಲೇ ಸರ್ಕಾರದ ಅಧಿನಿಯಮಗಳು ಎಂಬ ಪೇಜ್‌ ತೆರೆದುಕೊಳ್ಳುತ್ತದೆ. ಇದರ ಕೆಳಭಾಗದಲ್ಲಿಯೇ ಕೇಂದ್ರ ಸರ್ಕಾರದ ಅಧಿನಿಯಮಗಳು ಮತ್ತು ರಾಜ್ಯ ಸರ್ಕಾರದ ಅಧಿನಿಯಮಗಳು ಎಂಬ ವಿಭಾಗವಿದೆ. ಬೇಕಾದ ಅಧಿನಿಯಮದ ಮೇಲೆ ಕ್ಲಿಕ್‌ ಮಾಡಿದರೆ, ಪುಟ ತೆರೆದುಕೊಳ್ಳುತ್ತದೆ.

3 ದಿನಕ್ಕೆ 3 ಸಾವಿರ ಮಂದಿ ಭೇಟಿ
ಸೆ.6ರಂದು ಕಣಜ ವೆಬ್‌ಸೈಟ್‌ಗೆ ಅಧಿನಿಯಮಗಳ ಪಿಡಿಎಫ್ ಮಾದರಿಯನ್ನು ಅಪ್‌ಲೋಡ್‌ ಮಾಡಲಾಗಿದ್ದು, ಕೇವಲ ಮೂರು ದಿನಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ಮಾಹಿತಿ ವೀಕ್ಷಿಸಿದ್ದಾರೆ.

ಇಲಾಖೆಯಲ್ಲಿ ಲಭ್ಯವಿದ್ದಂತಹ ಅಧಿನಿಯಮಗಳನ್ನು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಳವಡಿಸಲಾಗಿದೆ. ಹೊಸ ಅಧಿನಿಯಮಗಳು ಬಂದಂತೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, “ಕಣಜ’ ತಂಡವು ಆ ಕಾರ್ಯವನ್ನು ನಿರ್ವಹಿಸಲಿದೆ.
– ವಿಶುಕುಮಾರ್‌, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ 

– ಸಂಪತ್‌ ತರೀಕೆರೆ

ಟಾಪ್ ನ್ಯೂಸ್

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.