CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಡು ಭ್ರಷ್ಟ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಒಗ್ಗಟ್ಟಾಗಿದೆ

ಭಿನ್ನಮತಕ್ಕೆ ಟ್ವೀಟ್‌ಗಳಲ್ಲೇ ತೇಪೆ ಹಚ್ಚಿದ ಸಂಸದೆ ಶೋಭಾ !

ಬೆಂಗಳೂರು: ಪರಿವರ್ತನಾ ರ‍್ಯಾಲಿ ವಿಚಾರದಲ್ಲಿ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದೆ ಎಂಬ ಸುದ್ದಿಯ ಬೆನ್ನಲ್ಲೇ ಸಂಸದೆ  ಶೋಭಾ ಕರಂದ್ಲಾಜೆ ಗುರುವಾರ ಸರಣಿ ಟ್ವೀಟ್‌ಗಳನ್ನು ಮಾಡಿ ತೇಪೆ ಹಚ್ಚಿದ್ದು, ಬಿಜೆಪಿ ಒಗ್ಗಟ್ಟಾಗಿದ್ದು,ಮಿಷನ್‌ 150 ಗಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

'ಬಿಜೆಪಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಒಗ್ಗಟ್ಟಾಗಿ ಮಿಷನ್‌ 150 ಯಶಸ್ಸಿಗಾಗಿ ಕೆಲಸ ಮಾಡುತ್ತಿದೆ. ನಕಾರಾತ್ಮಕ ಸುದ್ದಿಗಳನ್ನು ನೆಡುವ ಕಾಂಗ್ರೆಸ್ನ ಕೊಳಕು ತಂತ್ರಗಳು ಕೆಲಸಮಾಡುವುದಿಲ್ಲ' ಎಂದು ಬರೆದಿದ್ದಾರೆ. 

'ನೀವು ಎಲ್ಲಿ ಏನೇ ನಡುವ ಕೆಲಸ ಮಾಡಿ, ಆದರೆ ವಿಶ್ವದಲ್ಲೇ ಕಡು ಭ್ರಷ್ಟ ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ಒಗ್ಗಟ್ಟಾಗಿದೆ' ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. 

ಇನ್ನೊಂದು ಟ್ವೀಟ್‌ನಲ್ಲಿ 'ಆರ್‌ .ಅಶೋಕ್‌ ಮತ್ತು ನಾನು ಜೊತೆಯಾಗಿ ಪಕ್ಷಕ್ಕೆ ಕೆಲಸ ಮಾಡುತ್ತಿದ್ದು, ಬಿಜೆಪಿ ವಿರೋಧಿಗಳು ನಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ನಮ್ಮ ವಿರೋಧಿಗಳಲ್ಲಿ ನಂಬಿಕೆ ಇಡಬೇಡಿ ಎಂದು ಕಾರ್ಯಕರ್ತರಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ' ಎಂದು ಬರೆದಿದ್ದಾರೆ. 

ಇನ್ನೊಂದು ಟ್ವೀಟ್‌ನಲ್ಲಿ 'ಕೆಲ ಬಿಜೆಪಿ ವಿರೋಧಿಗಳು ಮಾಧ್ಯಮಗಳಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ನಾನು ಬಿಎಸ್‌ವೈ ಸರ್‌ ಬಳಿ ಶಿವಣ್ಣ , ರವೀಂದ್ರನಾಥ್‌ ಅವರನ್ನು ಸಾಂಪ್ರದಾಯಿಕ ಪ್ರಚಾರ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕೆಂದು ಕೇಳಿಕೊಂಡಿದ್ದೆ'ಎಂದು ಬರೆದಿದ್ದಾರೆ. 

Back to Top