CONNECT WITH US  

ಸದನ ಸಮಿತಿ ಸಭೆಗೆ ಹಾಜರಾಗಿ ಎಚ್‌ಡಿಕೆಗೆ ಡಿಕೆಶಿ ಮನವಿ 

ಬೆಂಗಳೂರು: ಕಾನೂನುಬಾಹಿರವಾಗಿ ಇಂಧನ ಖರೀದಿ ಮಾಡಿರುವ ಕುರಿತು ರಚನೆಯಾಗಿರುವ ಸದನ ಸಮಿತಿಯ ಕೊನೆಯ ಸಭೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬರಬೇಕು ಎಂದು ಸದನ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸದನ ಸಮಿತಿ ವರದಿಗೆ ಸಹಿ ಹಾಕುವುದಿಲ್ಲ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಸದನ ಸಮಿತಿಯ ಮುಂದೆ ತಮ್ಮ ಪಕ್ಷದ ಅಭಿಪ್ರಾಯ ಏನು ಎಂದು ಲಿಖೀತವಾಗಿ ಹೇಳಿಕೆ ನೀಡಿದ್ದಾರೆ. ರಾಜಕೀಯವಾಗಿ ಅವರು ಹೊರಗಡೆ ಏನು ಹೇಳುತ್ತಾರೋ ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಸದನ ಸಮಿತಿ ನ. 7ರಂದು ಅಂತಿಮ ಸಭೆ ನಡೆಸಲಾಗುತ್ತಿದೆ. ಕುಮಾರಸ್ವಾಮಿ ಅವರು ಅಂದಿನ ಸಭೆಗೆ ಹಾಜರಾಗದಿದ್ದರೆ, ಸದನ ಸಮಿತಿ ಏನು ವರದಿ ನೀಡಿದೆ ಎಂದು ಅವರಿಗೆ ತಿಳಿಯುವುದಿಲ್ಲ. ಅವರು ಜವಾಬ್ದಾರಿ ಇರುವ ವ್ಯಕ್ತಿಯಾಗಿರುವುದರಿಂದ ಅಂತಿಮ ಸಭೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top