ಬಾಹುಬಲಿ ದರ್ಶನಕ್ಕೆ ದೈಹಿಕ ಅಶಕ್ತರಿಗಾಗಿ ಡೋಲಿ ಸೇವೆ 

Team Udayavani, Feb 16, 2018, 6:20 AM IST

Bahubali-Mahamasthakabhishe.jpg

ಹಾಸನ: ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ನೆಲೆ ನಿಂತಿರುವ ಭಗವಾನ್‌ ಶ್ರೀ ಬಾಹುಬಲಿ ಮೂರ್ತಿಯ ದರ್ಶನ ಮಾಡುವ ಬಯಕೆ ಎಲ್ಲರಿಗೂ ಸಾಮಾನ್ಯ. ಆದರೆ ರೋಗಿಗಳು, ಅಂಗವಿಕಲರು ಹಾಗೂ ವಯೋವೃದ್ಧರಿಗೆ 3,347 ಅಡಿ ಎತ್ತರದ ವಿಂಧ್ಯಗಿರಿಯನ್ನು 618 ಮೆಟ್ಟಿಲು ಹತ್ತಿ ಬಾಹುಬಲಿ ದರ್ಶನ ಮಾಡುವುದು ಕಷ್ಟ. ಹಾಗೆಂದು ಅವರು ನಿರಾಶರಾಗಬೇಕಾಗಿಲ್ಲ. ಅಂತಹ ಅಸಹಾಯಕರಿಗೆ ಡೋಲಿ ವ್ಯವಸ್ಥೆಯಿದೆ.

ಬೆತ್ತದ ಕುರ್ಚಿಗೆ ಎರಡು ಗಳಗಳನ್ನು ಜೋಡಿಸಿಕೊಂಡು (ದೇವರ ಅಡ್ಡೆ ಮಾದರಿ) ಒಬ್ಬರನ್ನು ಕೂರಿಸಿಕೊಂಡು ನಾಲ್ವರು ಹೊತ್ತೂಕೊಂಡು ಬಾಹುಬಲಿಯ ಸನ್ನಿಧಿಗೆ ಬಿಟ್ಟು ದರ್ಶನ ಪಡೆದ ನಂತರ ಮತ್ತೆ ಬೆಟ್ಟದಿಂದ ಹೊತ್ತುಕೊಂಡು ಕೆಳಗಿಳಿಸುವುದು ಡೋಲಿ ವ್ಯವಸ್ಥೆ. ಆದರೆ ಡೋಲಿಯಲ್ಲಿ ಹೋಗಿ ಬರುವವರು ನಿಗದಿತ ಶುಲ್ಕ ಪಾವತಿ ಮಾಡಬೇಕು. ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಡೋಲಿ ಸೇವೆಯ ಶುಲ್ಕ ತುಸು ದುಬಾರಿ. ಸಾಮಾನ್ಯ ದಿನಗಳಲ್ಲಿ ಒಬ್ಬರನ್ನು ಬೆಟ್ಟಕ್ಕೆ ಕರೆದೊಯ್ದು ವಾಪಸ್‌ ಕರೆ ತರಲು 700ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಆದರೆ ಈಗ ಮಹಾಮಸ್ತಕಾಭಿಷೇಕದ ಸಂದರ್ಭವಾಗಿರುವುದರಿಂದ 1,250 ರೂ. ನಿಗದಿಪಡಿಸಲಾಗಿದೆ. ಶ್ರವಣಬೆಳಗೊಳದ ವಿಂಧ್ಯಗಿರಿ ಏರುವವರಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರಗೆ ಡೋಲಿ ವ್ಯವಸ್ಥೆ ಮಾಡಲಾಗಿದೆ.

ಸಾಮಾನ್ಯ ದಿನಗಳಲ್ಲಿ  ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ 20 ಡೋಲಿವಾಲಾಗಳು ಕಾರ್ಯ ನಿರ್ವಹಿಸುತ್ತಾರೆ. ಆದರೆ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಹೆಚ್ಚು ಡೋಲಿಗಳು ಹಾಗೂ ಡೋಲಿವಾಲಾಗಳು ಅಗತ್ಯ. ಹಾಗಾಗಿ ಈ ಮೊದಲು ಸೇವೆ ಸಲ್ಲಿಸುತ್ತಿದ್ದ ಸ್ಥಳೀಯ ಡೋಲಿವಾಲಾಗಳೊಂದಿಗೆ ಜಾರ್ಖಂಡ್‌ನ‌ ಗಿರಿದ್‌ ಜಿಲ್ಲೆಯ ಮಧುವನದಿಂದ 80 ಡೋಲಿವಾಲಾಗಾಳು ಆಗಮಿಸಿ ಡೋಲಿ ಸೇವೆ ಸಲ್ಲಿಸುತ್ತಿದ್ದಾರೆ. ಫೆ.16 ರಿಂದ ಹೆಚ್ಚುವರಿಯಾಗಿ 300 ಡೋಲಿವಾಲಾಗಳು ಜಾರ್ಖಂಡ್‌ನಿಂದ ಆಗಮಿಸುತ್ತಿದ್ದಾರೆ. ಜಾರ್ಖಂಡ್‌ನ‌ವರು ತಾವೇ ಡೋಲಿ ಸಿದ್ಧಪಡಿಸಿಕೊಂಡು ಬಂದಿದ್ದರೆ, ಸ್ಥಳೀಯ ಡೋಲಿವಾಲಾಗಳು ತಮ್ಮ ಗ್ರಾಮದಲ್ಲಿಯೇ ಡೋಲಿ ಸಿದ್ಧಪಡಿಸಿಕೊಂಡು ಬರುತ್ತಾರೆ.

ಶ್ರವಣಬೆಳಗೊಳದ ಜೈನ ಮಠದಿಂದ ಡೋಲಿ ಸೇವೆ ನೀಡಲಾಗುತ್ತಿದ್ದು ಅವುಗಳನ್ನು ಬೆತ್ತದಿಂದ ನಿರ್ಮಿಸಲಾಗಿದೆ. ಈಗ ಹೆಚ್ಚುವರಿಯಾಗಿ 5 ಬೆತ್ತದ ಡೋಲಿಗಳನ್ನು ಶ್ರೀಮಠದ ಆಡಳಿತ ಮಂಡಳಿ ಒದಗಿಸುತ್ತಿದೆ. ಫೆ.25ಕ್ಕೆ ಮಹಾ ಮಸ್ತಕಾಭಿಷೇಕ ಮಹೋತ್ಸವ ಮುಗಿದರೂ ಯಾತ್ರಾರ್ಥಿಗಳು ಮಾರ್ಚ್‌ ಅಂತ್ಯದವರೆಗೂ ಬರುವ ಸಾಧ್ಯತೆಯಿದೆ. ಹಾಗಾಗಿ ಜಾರ್ಖಂಡ್‌ನ‌ ಡೋಲಿವಾಲಾಗಳು ಹೆಚ್ಚಿನ ವಹಿವಾಟು ನಡೆಸುವ ನಿರೀಕ್ಷೆಯಲ್ಲಿದ್ದಾರೆ.

ಜಾರ್ಖಂಡ್‌ನ‌ ಶಿಖರ್ಜಿ ಎಂಬಲ್ಲಿ ಜೈನಧರ್ಮದ 24 ತೀರ್ಥಂಕರರು ಮೋಕ್ಷ ಹೊಂದಿದ ಪವಿತ್ರ ಕ್ಷೇತ್ರವಿದೆ. ಅದೂ  ಭಾರಿ ಎತ್ತರದ ಬೆಟ್ಟ. ಅಲ್ಲಿನ ಯಾತ್ರಾರ್ಥಿಗಳು ಸುಮಾರು 29ಕಿ.ಮೀ. ವರೆಗೆ ಕ್ರಮಿಸಬೇಕಿರುವುದರಿಂದ ಸಾವಿರಾರು ಮಂದಿ ಡೋಲಿ ಕೆಲಸ ಮಾಡಿಕೊಂಡು ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಾರೆ. ಪರಿಣಿತ ಡೋಲಿವಾಲಾರು ಇರುವ ದೇಶದ ಏಕೈಕ ರಾಜ್ಯ ಜಾರ್ಖಂಡ್‌, ಹಾಗಾಗಿ ಅಲ್ಲಿಂದ ಡೋಲಿ ಸೇವಾಗಾರರನ್ನು ಕರೆಸಲಾಗಿದೆ.ಡೋಲಿ ಹೊರುವುದು ನಮಗೇನೂ ಕಷ್ಟವಲ್ಲ. ಜಾರ್ಖಂಡ್‌ನ‌ ತೀರ್ಥಂಕರ ಬೆಟ್ಟಕ್ಕೆ ಹೋಲಿಸಿದರೆ ಶ್ರವಣಬೆಳಗೊಳದ ವಿಂಧ್ಯಗಿರಿ ಅಷ್ಟೇನೂ ಕಷ್ಟವಲ್ಲ. ಈಗ ನಿತ್ಯ ಸರಾಸರಿ 200ಕ್ಕೂ ಹೆಚ್ಚು ಮಂದಿ ಡೋಲಿಯಲ್ಲಿ ಬೆಟ್ಟ ಏರುತ್ತಿದ್ದಾರೆ. ರಜಾ ದಿನಗಳಲ್ಲಿ ಇನ್ನೂ ಹೆಚ್ಚು ಜನರಿಗೆ ಡೋಲಿ ಅಗತ್ಯವಾಗಬಹುದು. ಫೆ.17ರಿಂದ ಡೋಲಿ ಬಳಸುವವರ ಸಂಖ್ಯೆ 500 ದಾಟಬಹುದು. ಅಮಯ್‌ಕುಮಾರ್‌, ಡೋಲಿವಾಲಾ, ಜಾರ್ಖಂಡ್‌ನಿಂದ ಆಗಮಿಸಿದವರು

– ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.