CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸೋಮವಾರ ಮಧ್ಯರಾತ್ರಿಯಿಂದ ಸುಜ್ಲಾನ್‌ ಲಾಕೌಟ್‌ ಘೋಷಣೆ

ಪಡುಬಿದ್ರಿ : ಇಲ್ಲಿನ ಸುಜ್ಲಾನ್‌ ಎನರ್ಜಿ ಘಟಕವನ್ನು ಕಂಪೆನಿಯು ಸೋಮವಾರ ಮಧ್ಯರಾತ್ರಿಯಿಂದ ತನ್ನ ನೌಕರರಿಗೆ ಮುಚ್ಚಲಾಗಿದೆ.

ಕೈಗಾರಿಕಾ ವಿವಾದ ಕಾಯಿದೆ ಸೆ.22 ಉಪ ಸೆ.2ರ ಪ್ರಕಾರ ಲಾಕೌಟ್‌ ಘೋಷಿಸಲು ಕಂಪೆನಿಯು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. 

ಅದರೆ ಕಂಪೆನಿಯು ತನ್ನ ನೌಕರರಿಗೆ ಲಾಕೌಟ್‌ ಘೋಷಣೆಯ ಯಾವುದೇ ಮುನ್ಸೂಚನೆ ನೀಡಿಲ್ಲವೆಂದು ತಿಳಿದುಬಂದಿದೆ. ಸುಜ್ಲಾನ್‌ ಕಂಪೆನಿಯು ತನ್ನ ಪಡುಬಿದ್ರಿ ಘಟಕದಲ್ಲಿ  ಗಾಳಿ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಬೇಕಾಗುವ ರೆಕ್ಕೆಗಳನ್ನು  ಉತ್ಪಾದಿಸುತ್ತಿತ್ತು. 

ಕಂಪೆನಿಯು ತಾನು ಲಾಕೌಟ್‌ ಘೋಷಿಸಲು ನೌಕರರ ದುರ್ವರ್ತನೆ ಮತ್ತು ವಿಧ್ವಂಸಕ ಕೃತ್ಯಗಳೇ ಕಾರಣ ಎಂದು ಹೇಳಿದೆ. ಇದರಿಂದ ತನಗೆ ಅಪಾರ ನಾಶ ನಷ್ಟ ಉಂಟಾಗಿದೆ ಎಂದು ಹೇಳಿದೆ.

ಸೋಮವಾರ ರಾತ್ರಿ ಪಾಳಿ ನೌಕರರನ್ನು ಇದ್ದಕ್ಕಿದ್ದಂತೆಯೇ ಕಂಪೆನಿಯ ಆವರಣದಿಂದ ಹೊರಕಳಿಸಲಾಯಿತು. ಪರಿಣಾಮವಾಗಿ 326 ಕೆಲಸಗಾರರು ಸೇರಿದಂತೆ ಒಟ್ಟು  600 ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದು ಕೊಂಡರು. ಮಂಗಳವಾರ ಬೆಳಗ್ಗಿನಿಂದ ಭಾರೀ ಸಂಖ್ಯೆಯ ಕಾರ್ಮಿಕರು ಕಂಪೆನಿಯ ಪ್ರಮುಖ ದ್ವಾರದ ಮುಂದೆ ಜಮಾಯಿಸಿದರು. 

ಎರಡು ವಾರಗಳ ಹಿಂದೆ ಕಂಪೆನಿಯ ಆವರಣದಲ್ಲಿ ಧರಣಿ ನಡೆಸಿದ್ದರು. ಅವರನ್ನು ಕೂಡಲೇ ತೆರವುಗೊಳಿಸಲಾಗಿ ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಉದ್ಯೋಗದಿಂದ ತೆಗೆದುಹಾಕಲಾಗಿತ್ತು.  

ಇಂದು ಹೆಚ್ಚು ಓದಿದ್ದು

ಧರ್ಮಸಂಸದ್‌ ಉದ್ಘಾಟನೆಗೆ ಪೂರ್ವಭಾವಿಯಾಗಿ ಸಾಧು ಸಂತರು ಹಾಗೂ ಗಣ್ಯರು ಕೃಷ್ಣ ಮಠದ ರಾಜಾಂಗಣದಿಂದ ಮೆರವಣಿಗೆಯಲ್ಲಿ ಸಮ್ಮೇಳನಾಂಗಣಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದರು.

Nov 25, 2017 07:53am

ಧರ್ಮ ಸಂಸದ್‌ನ ಸ್ಮರಣಸಂಚಿಕೆ "ಪಾಥೇಯ'ವನ್ನು ಶ್ರೀ ನಿರ್ಮಲಾನಂದ ಸ್ವಾಮೀಜಿ ಅನಾವರಣಗೊಳಿಸಿದರು.

Nov 25, 2017 07:49am
Back to Top