CONNECT WITH US  

ಸುದ್ದಿಗೋಷ್ಠಿಯಲ್ಲಿ ವರದಿಗಾರನ ಮೇಲೆ ಬಿಜೆಪಿ ನಾಯಕರ ಗೂಂಡಾಗಿರಿ 

ಅಕ್ರಮ ಗಣಿಗಾರಿಗೆ ಬಗ್ಗೆ ವರದಿ ಮಾಡಿದ್ದೆ ತಪ್ಪಾಯಿತೆ ?

ಸಾಂದರ್ಭಿಕ ಚಿತ್ರ ಮಾತ್ರ

 ತುಮಕೂರು: ಇಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನೊಬ್ಬನ ಮೇಲೆ ಬಿಜೆಪಿ ಮುಖಂಡರಿಬ್ಬರು ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿ ಗೂಂಡಾಗಿರಿ ಮೆರೆದ ಘಟನೆ ಶನಿವಾರ ನಡೆದಿದೆ.

ಅಕ್ರಮ ಕಲ್ಲು ಗಣಿಗಾರಿಗೆಯ ಬಗ್ಗೆ ವರದಿ ಮಾಡಿದ ಖಾಸಗಿ ವಾಹಿನಿಯ ವರದಿಗಾರ ವಾಗೀಶ್‌ ಎನ್ನುವವರ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ  ಮತ್ತು ಪಾಲಿಕೆ ಸದಸ್ಯ ಬಾವಿಕಟ್ಟೆ ನಾಗಣ್ಣ ಎನ್ನುವವರು ಏಕಾಏಕಿ  ಎರಗಿ  ಹಲ್ಲೆ ನಡೆಸಿ ಬಟ್ಟೆಹರಿದು ಹಾಕಿದ್ದಾರೆ. 

ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಪ್ರಕರಣದ ತನಿಖೆ ನಡೆಸುವುದಾಗಿ  ತುಮಕೂರು ಎಸ್‌ಪಿ ದಿವ್ಯಾ ಗೋಪಿನಾಥ್‌ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. 

ಹಲ್ಲೆ ನಡೆದ ವೇಳೆ ವಾಗೀಶ್‌ ಒಬ್ಬರೆ ಇದ್ದು ಅಸಹಾಯಕರಾಗಿದ್ದರು, ಬೇರೆ ಯಾವ ಚಾನಲ್‌ನ ಪತ್ರಕರ್ತರು ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ನಿರಂತರವಾಗಿ ವಾಗೀಶ್‌ಗೆ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. 

Trending videos

Back to Top