CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಿಜೆಪಿ v/s ಕೆಜೆಪಿ ಜೋಡಾಟ!; ಬಿಎಸ್‌ವೈಗೆ ಇರಿಸು ಮುರಿಸು

ಬೀದರ್‌: ಜಿಲ್ಲೆಯ ಔರಾದ್‌ ವಿಧಾನಸಭಾ ಕ್ಷೇತ್ರದಲ್ಲಿ  ಗುರುವಾರ ನಡೆಯುತ್ತಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಕ್ಷದಲ್ಲಿನ  ಭಿನ್ನಮತ ಭುಗಿಲೆದಿದ್ದು, ಬಹಿರಂಗವಾಗಿ ವಾಗ್ವಾದ ನಡೆದು ಬಿ.ಎಸ್‌.ಯಡಿಯೂರಪ್ಪ ಅವರು ತೀವ್ರ ಇರಿಸು ಮುರಿಸು ಎದುರಿಸಬೇಕಾಯಿತು.

ಶಾಸಕ ಪ್ರಭು ಚೌಹಾಣ್‌ ಮತ್ತುಕಳೆದ ಬಾರಿ  ಕೆಜೆಪಿ ಅಭ್ಯರ್ಥಿಯಾಗಿ ಪರಾಜಿತಗೊಂಡಿದ್ದ ಧಾನಾಜಿ ಜಾಧವ್‌ ಅವರೊಳಗಿನ ಭಿನ್ನಮತ ಸ್ಫೋಟಗೊಂಡು ತೀವ್ರ ಉದ್ವಿಗ್ನ ಸ್ಥಿತಿಗೆ ಕಾರಣವಾಗಿ ಸಮಾರಂಭವನ್ನು ಗೊಂದಲದ ಗೂಡನ್ನಾಗಿಸಿತು.

ಯಡಿಯೂರಪ್ಪ ಅವರು ವೇದಿಕೆಯಲ್ಲಿದ್ದಾಗಲೇ ಪರಸ್ಪರ ಧಿಕ್ಕಾರಗಳನ್ನು ಕೂಗಲಾಯಿತು. ಧಾನಾಜಿ ಅವರ ನೂರಾರು ಬೆಂಬಲಿಗರು ಆಗಮಿಸಿ  ಶಾಸಕ ಚೌಹಾಣ್‌ ವಿರುದ್ಧ ಧಿಕ್ಕಾರ ಕೂಗಿದರು. 

ಯಡಿಯೂರಪ್ಪ ಅವರು ವೇದಿಕೆಯಲ್ಲಿದ್ದಾಗಲೇ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಗೊಂದಲದ ಕುರಿತಾಗಿ ಯಡಿಯೂರಪ್ಪ ಅವರು ಕೆಂಡಾಮಂಡಲವಾಗಿ  ಸಂಸದ ಭಗವಂತ್‌ ಖೂಬಾ ಅವರನ್ನುತರಾಟೆಗೆ ತೆಗೆದುಕೊಂಡಿರುವುದಾಗಿ  ವರದಿಯಾಗಿದೆ. 

ಪಕ್ಷದಿಂದಲೇ ಹೊರ ಹಾಕುತ್ತೇನೆ!

ಘಟಕನೆಯ ಬಳಿಕ  ಗುಡುಗಿದ ಯಡಿಯೂರಪ್ಪ ಪಕ್ಷ ವಿರೋಧಿ ಹೇಳಿಕೆ ಚಟುವಟಿಕೆ ನಡೆಸಿದರೆ ಪಕ್ಷದಿಂದಲೆ ಹೊರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. 

'ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ.ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಬನ್ನಿ ಕುಳಿತು ಬಗೆಹರಿಸಿಕೊಳ್ಳುವ' ಎಂದು ಸಲಹೆ ನೀಡಿದ್ದಾರೆ. 

Back to Top