CONNECT WITH US  

ಹೆಲಿಕಾಪ್ಟರ್‌ಗಾಗಿ ಒಂದು ಗಂಟೆ ಕಾದ ಸಿಎಂ

ಕಲಬುರಗಿ: ಹೆಲಿಕಾಪ್ಟರ್‌ಗೆ ಸಕಾಲಕ್ಕೆ ಇಂಧನ ಬಾರದಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು.ಬೆಳಗ್ಗೆ 11ಕ್ಕೆ ಮಹಿಳಾ ಕೈಗಾರಿಕಾ ಪಾರ್ಕ್‌ ಹಾಗೂ ಎಚ್‌ಕೆಇ ಸಂಸ್ಥೆ ಸಭಾಂಗಣ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಅವರು ಹೆಲಿಕಾಪ್ಟರ್‌ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣಕ್ಕೆ ತೆರಳಬೇಕಿತ್ತು. ಆದರೆ, ಹೆಲಿಕಾಪ್ಟರ್‌ಗೆ ಇಂಧನ ಇರದಿದ್ದರಿಂದ ನಗರದ ಐವಾನ್‌ ಶಾಹಿ ಅತಿಥಿಗೃಹದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸುಮ್ಮನೆ ಕೂರಬೇಕಾಯಿತು. 

ಹೆಲಿಕಾಪ್ಟರ್‌ಗೆ ತುಂಬಿಸುವ ಇಂಧನವನ್ನು ತೋರಣಗಲ್ಲಿನಿಂದ ವಾಹನದಲ್ಲಿ ಶನಿವಾರ ರಾತ್ರಿಯೇ ಕಳುಹಿಸಿಕೊಡಲಾಗಿತ್ತು. ಆದರೆ, ನಗರಕ್ಕೆ ಬರುವುದು ತಡವಾಯಿತು. ಕೊನೆಗೆ ಬೀದರ ಏರ್‌ಬೇಸ್‌ನಿಂದ ಇಂಧನ ತರಿಸಲಾಯಿತು. ಮಧ್ಯಾಹ್ನ 12:28ಕ್ಕೆ ಸಿಎಂ ಹುಣಸಗಿಗೆ ತೆರಳಿದರು.

ಇದರಿಂದ ಬೇಸರಗೊಂಡ ಸಿಎಂ, "ನೀವೆಲ್ಲಾ ಬೆಳಗ್ಗೆಯಿಂದ ಏನು ಮಾಡಿದ್ದೀರಿ? ಮೊದಲೇ ವಿಚಾರಣೆ ಮಾಡಬೇಕಿತ್ತು. ಹೀಗೆ ಲೋಪ ಮಾಡಿದರೆ ಹೇಗೆ' ಎಂದು ಪ್ರಾದೇಶಿಕ ಆಯುಕ್ತ, ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


Trending videos

Back to Top