CONNECT WITH US  

ಮಹದಾಯಿ ಹೋರಾಟ ಮುಖಂಡ ಸೊಬರದಮಠ ಮೇಲೆ ಹಲ್ಲೆ 

ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ 

ನರಗುಂದ: ಮಹದಾಯಿ ಹೋರಾಟ ಸಮಿತಿಯ  ಮುಖಂಡ ವಿರೇಶ್‌ ಸೊಬರದಮಠ ಮೇಲೆ ರೈತರ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ. 

ಸಭೆ ನಡೆಯುತ್ತಿದ್ದ ವೇಳೆ ವೇದಿಕೆಯತ್ತ ನುಗ್ಗಿ ಬಂದ ಹತ್ತಾರು ಮಂದಿ  ವಿರೇಶ್‌ ಸೊಬರದಮಠ ವಿರುದ್ಧ ಆಕ್ರೋಶ ಹೊರಹಾಕಿ  ಎಳೆದಾಡಿ  ಹಲ್ಲೆ ನಡೆಸಿದ್ದಾರೆ. 

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. 

ಹಲ್ಲೆ ನಡೆಸಿದವರು ಯಾಕೆ ನೀವು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದಿರಿ? ರೈತರ ಹೊರಾಟವನ್ನು ರಾಜಕೀಯ ಮಾಡಿದ್ದು ಯಾಕೆ? ನೀವು ರಾಜ್ಯ ಕಾಂಗ್ರೆಸ್‌ ಸರ್ಕಾರದ ಪರಿ ಇದ್ದೀರಿ ಎಂದು ಕೂಗಾಡಿರುವುದು ಕಂಡು ಬಂದಿದೆ. 


Trending videos

Back to Top