ಬೈಕ್ ಕಾರು ಡಿಕ್ಕಿ: ಕ್ಯಾಬ್ ಚಾಲಕನ ಮೇಲೆ ತಲ್ವಾರ್ನಿಂದ ಹಲ್ಲೆ
Team Udayavani, Jan 1, 2018, 9:24 AM IST
ಬೆಂಗಳೂರು: ಹೊಸ ವರುಷದ ಸಂಭ್ರಮದ ನಡುವೆಯೇ ಎಂ.ಜಿ.ರೋಡ್ನಲ್ಲಿ ಕ್ಯಾಬ್ ಚಾಲಕನ ಮೇಲೆ ತಲ್ವಾರಿನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಭಾನುವಾರ ತಡರಾತ್ರಿ ಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದಿದ್ದು, ನಂತರ ಎರಡು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕ್ಯಾಬ್ ಚಾಲಕ ಮೇಲೆ ತಲ್ವಾರ್ನಿಂದ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಕ್ಯಾಬ್ ಚಾಲಕನ ಕೈಗೆ ತೀವ್ರ ಗಾಯಗಳಾಗಿದೆ ಎಂದು ವರದಿಯಾಗಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.