CONNECT WITH US  

ರಜನಿ ರಾಜಕೀಯ ಭವಿಷ್ಯ ಉಜ್ವಲವಾಗಲಿ'

ಬೆಂಗಳೂರು: ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್‌ರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಶುಭ ಕೋರಿದ್ದಾರೆ. ಈ ಹಿಂದಿನಿಂದಲೂ ರಜನಿಕಾಂತ್‌ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಯಿತ್ತು. ಈಗ ಅವರು ರಾಜಕೀಯಕ್ಕೆ ಬರುವ ಆಸೆ ತೋರಿದ್ದಾರೆ.

ಹಾಗೆಯೇ ತಮಿಳುನಾಡಲ್ಲಿ ಚಿತ್ರರಂಗದಿಂದ ರಾಜಕೀಯಕ್ಕೆ ಬಂದವರು ಮುಖ್ಯಮಂತ್ರಿಯೂ ಆಗಿದ್ದಾರೆಂದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ಶಾ ರಾಜ್ಯಕ್ಕೆ ಬಂದರೆ ನಮಗೇನು ತೊಂದರೆಯಿಲ್ಲ. ಅವರ ತಂತ್ರಕ್ಕೆ ನಾವು ರಣತಂತ್ರ ರೂಪಿಸುತ್ತಿದ್ದೇವೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರೂ ಮಾಸಾಂತ್ಯಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Trending videos

Back to Top