CONNECT WITH US  

ಒಂದಲ್ಲ, ಎರಡಲ್ಲ, ಸಹಸ್ರಾರು ವಿವೇಕಾನಂದರು!

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡ ಜಿಡಗಾ ಮಠದ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ 10,054 ವೇಷಧಾರಿಗಳು ಸಾಮೂಹಿಕವಾಗಿ ಕಾಣಿಸಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದರು.

ಬೆಳಗಾವಿ: ರಾಯಬಾಗ ತಾಲೂಕಿನ ಮುಗಳಖೋಡ ಜಿಡಗಾ ಮಠದ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಕಾರ್ಯಕ್ರಮದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ 16ರಿಂದ 39 ವಯಸ್ಸಿನ 10,054 ಜನರು
ವಿವೇಕಾನಂದರ ವೇಷ ಧರಿಸಿದರು.

ಜೊತೆಗೆ, 884 ವಾದ್ಯಗಾರರು ಕಹಳೆ, ಜಗ್ಗಲಿಗೆ, ಡೊಳ್ಳು, ಸಂಬಾಳ, ಚಂಡೆ, ಮದ್ದಳೆ, ನಗಾರಿ, ಮೈಸೂರಿನ
ವಾದ್ಯಗಳು ಸೇರಿ ವಿವಿಧ ದೇಸಿ ವಾದ್ಯಗಳನ್ನು ಸಾಮೂಹಿಕವಾಗಿ ಬಾರಿಸಿದರು. ಇವೆರಡೂ ಏಷಿಯನ್‌ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ ಪ್ರವೇಶಿಸುವ ಮೂಲಕ ಮಠದ ಹೆಸರು ಇತಿಹಾಸಕ್ಕೆ ಸೇರ್ಪಡೆಯಾ ಯಿತು. ಈ ಸಂಸ್ಥೆಗಳ ಮುಖ್ಯಸ್ಥರಾದ ಡಾ| ಮನೀಷ ವಿಷ್ಣುಯಿ ಹಾಗೂ ಡಾ| ಅನಿತಾ ದೇಸಾಯಿ ಈ ಎರಡೂ ದಾಖಲೆಗಳನ್ನು ವೇದಿಕೆಯಲ್ಲಿ ಘೋಷಿಸಿ, ಶ್ರೀ ರವಿಶಂಕರ ಗುರೂಜಿ ಹಾಗೂ ಡಾ| ಮುರುಘರಾಜೇಂದ್ರ ಸ್ವಾಮಿಗಳಿಗೆ ಪ್ರಮಾಣ ಪತ್ರ ನೀಡಿದರು. ಈ ಮುಂಚೆ 2015ರಲ್ಲಿ ರಾಯಪುರದಲ್ಲಿ ಮಹಾವೀರ ಇಂಟರನ್ಯಾಷನಲ್‌ ವತಿಯಿಂದ 2576 ಜನ ವಿವೇಕಾನಂದರ ವೇಷ ಧರಿಸಿದ್ದು ದಾಖಲೆಯಾಗಿತ್ತು. ಸ್ವಾಮಿ ವಿವೇಕಾನಂದರ 
ವೇಷಧಾರಿಗಳಿಗೆ ಎಸ್‌.ಎಸ್‌.ಆರ್ಟ್ಸ್ನ 70 ಜನರ ತಂಡ ಪೇಟಾ ತೊಡಿಸಿತ್ತು. ಜತೆಗೆ ವೇಷಧಾರಿಗಳು ವಿವೇಕಾನಂದರ ಸಂದೇಶವನ್ನು ಸಾಮೂಹಿಕವಾಗಿ ಹೇಳುವ ದಾಖಲೆ ಜ.13ರಂದು ನಿರ್ಮಾಣವಾಗಲಿದೆ. ಈ ದಾಖಲೆಯೊಂದಾದರೆ ಮುಗಳಖೋಡ ಮಠದಲ್ಲಿ ಒಟ್ಟು ಮೂರು ದಾಖಲೆಗಳು ನಿರ್ಮಾಣವಾದಂತಾಗುತ್ತದೆ.

- ಭೈರೋಬಾ ಕಾಂಬಳೆ

Trending videos

Back to Top