CONNECT WITH US  

ಒಂದೇ ನಕಲಿ ವಿಳಾಸ,6 ಪ್ರತ್ಯೇಕ ಸಿಮ್‌!

ಮೈಸೂರಲ್ಲಿ 20 ರೂ. ಟಾಪ್‌ ಅಪ್‌ ರೀಚಾರ್ಜ್‌ ಮಾಡಿ ಉಗ್ರರು ಪೊಲೀಸರಿಗೆ ಸುಳಿವು ನೀಡಿದರು!

ಸಾಂದರ್ಭಿಕ ಚಿತ್ರ..

ಬೆಂಗಳೂರು: ಅಂತರ್ಜಾಲದಿಂದ ಫೋರ್ಜರಿ ಮಾಡಿದ ಒಂದು ಮತದಾರರ ಗುರುತಿನ ಚೀಟಿ, ಆ ಮೂಲಕ ಪಡೆದ ಆರು ಸಿಮ್‌ ಕಾರ್ಡ್‌ಗಳು! ಅವುಗಳನ್ನು ಬಳಸಿದ್ದು ಐವರು ಉಗ್ರರು, ಪರಿಣಾಮ ಐದು ಕೋರ್ಟ್‌ ಆವರಣಗಳಲ್ಲಿ ಬಾಂಬ್‌ ಸ್ಫೋಟ!

ಮೈಸೂರು ಮತ್ತಿತರ ಕಡೆ ಕೋರ್ಟ್‌ ಆವರಣಗಳಲ್ಲಿ ಬಾಂಬ್‌ ಸ್ಫೋಟಿಸಿ ತಲ್ಲಣ ಮೂಡಿಸಿದ್ದ ಎಕ್ಯೂಐಎಸ್‌ "ಬೇಸ್‌
ಮೂವ್‌ಮೆಂಟ್‌' ಉಗ್ರ ಸಂಘಟನೆ ಸದಸ್ಯರ ವಿಚಾರಣೆ ವೇಳೆ ಇಂತಹ ಮಹತ್ತರ ಮಾಹಿತಿಗಳು ಬಯಲಾಗಿವೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ
ಉಲ್ಲೇಖೀಸಲಾಗಿದೆ.

ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ಉಂಟು ಮಾಡುವ ಪ್ರಚಾರದ ಬಗ್ಗೆ ಅರಿತಿದ್ದ ಬೇಸ್‌ ಮೂವ್‌ಮೆಂಟ್‌, ಅದೇ ಮಾದರಿಯಲ್ಲಿ ತನ್ನ ಮೊದಲ ಹೆಜ್ಜೆ ಇರಿಸಿತ್ತು. ಹೀಗಾಗಿಯೇ ಸಂಘಟನೆ ಎಲ್ಲ ಬಾಂಬ್‌ ಸ್ಫೋಟಗಳ ವಿಚಾರ ತಿಳಿಯಪಡಿಸಲು ನಕಲಿ ಫೇಸ್‌ ಬುಕ್‌ ಅಕೌಂಟ್‌ ತೆರೆದಿತ್ತು.

ಅಲ್ಲದೆ ಪ್ರಧಾನಿ ಮೋದಿ ಅಭಿಮಾನಿಗಳ ಬಳಗದ " ನಮೋ ವ್ಯಾಟ್ಸ್‌ಆ್ಯಪ್‌' ಗ್ರೂಪ್‌ ಸೇರಿ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕ ಜೀವನದಲ್ಲಿದ್ದ ವ್ಯಕ್ತಿಗಳ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ತನ್ನ ಪ್ರಚಾರಕ್ಕೆ ಆಯ್ದು ಕೊಂಡಿತ್ತು ಎಂಬ ಆಘಾತಕಾರಿ ಅಂಶವೂ ತನಿಖೆಯಲ್ಲಿ ಪತ್ತೆಯಾಗಿದೆ.

"ಮೊಹಮದ್‌..ಮೊಹಮದ್‌' ಎಂಬ ಫೇಸ್‌ಬುಕ್‌ ಅಕೌಂಟ್‌ ಹಾಗೂ ತಮ್ಮ ಬಳಿಯಿದ್ದ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಿಗೆ
ಬಾಂಬ್‌ ಸ್ಫೋಟ ನಡೆಸುವ ಮುನ್ನ ಅಥವಾ ಬಳಿಕ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸುತ್ತಿತ್ತು. ಅಚ್ಚರಿಯ ಸಂಗತಿಯೆಂದರೆ, ಈ ಸಂದೇಶಗಳನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿರಲಿಲ್ಲ, ಪೊಲೀಸರಿಗೂ
ಈ ಬಗ್ಗೆ ಮಾಹಿತಿ ನೀಡಿರಲಿಲ್ಲ . ಸದ್ಯಕ್ಕೆ ಪತ್ತೆಯಾಗಿರುವ "ಮೊಹಮದ್‌' ಹೆಸರಿನ ನಕಲಿ ಫೇಸ್‌ಬುಕ್‌ ಖಾತೆಯ ಮಾದರಿಯಲ್ಲಿಯೇ ಆರೋಪಿಗಳು ಮತ್ತಷ್ಟು ಫೇಸ್‌ಬುಕ್‌ ಖಾತೆಗಳನ್ನು ನಿರ್ವಹಿಸಿರುವ ಸಾಧ್ಯತೆಯಿದೆ. ಹೀಗಾಗಿ,
ಹಲವು ಖಾತೆಗಳ ಐಪಿ ವಿಳಾಸ ಸೇರಿ ಇನ್ನಿತರೆ ಮಾಹಿತಿ ನೀಡಲು ಅಮೆರಿಕಾದಲ್ಲಿರುವ ಫೇಸ್‌ಬುಕ್‌ ಸಂಸ್ಥೆಗೆ ಎನ್‌ಐಎ ಪತ್ರ ಬರೆದಿದ್ದು, ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ನಕಲಿ ವೋಟರ್‌ ಐಡಿಗೆ 6 ಸಿಮ್‌ ಕಾರ್ಡ್‌!: ಬೇಸ್‌ಮೂವ್‌ಮೆಂಟ್‌ ಮಾಸ್ಟರ್‌ ಮೈಂಡ್‌ ಅಬ್ಟಾಸ್‌ ಅಲಿಗೆ
ಸಂಘಟನೆಯ ಪ್ರಸ್ತುತತೆ ಬಗ್ಗೆ ಪ್ರಚುರಪಡಿಸಲು ಮತ್ತು ವೈಯಕ್ತಿಕ ವಿವರ ಪೊಲೀಸರಿಗೆ ಗೊತ್ತಾಗದಂತೆ ಮಾಡಲು ಸಿಮ್‌ಕಾರ್ಡ್‌ಗಳು ಬೇಕಾಗಿದ್ದವು. ಅದರ ಭಾಗ ಎಂಬಂತೆ ಟೆಕ್ನಿಕಲ್‌ ಎಕ್ಸ್‌ಪರ್ಟ್‌,ಚೆನ್ನೈನ ಖಾಸಗಿ ಸಂಸ್ಥೆ ಎಂಜಿನಿಯರ್‌ ಆಗಿದ್ದ ದಾವೂದ್‌ ಸುಲೈಮಾನ್‌ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಮತದಾರರ ಗುರುತಿನ ಚೀಟಿ ಡೌನ್‌ ಲೋಡ್‌ ಮಾಡಿಕೊಂಡು, ಅದರ ಮಾದರಿಯಲ್ಲೇ 3 ಪ್ರತ್ಯೇಕ ಪ್ರದೇಶಗಳ ವಿಳಾಸ ಸಿದಟಛಿಪಡಿಸಿ ಆರು ಸಿಮ್‌ ಕಾರ್ಡ್‌ ಹಾಗೂ ನಾಲ್ಕು ಮೊಬೈಲ್‌ ಫೋನ್‌ಗಳನ್ನು ಖರೀದಿಸಿದ್ದರು.

ಅಪರಿಚಿತರ ಹೆಸರಿನಲ್ಲಿ ಪಡೆದ ಈ ಎಲ್ಲಾ ಮೊಬೈಲ್‌ಗ‌ಳನ್ನು ಹಾಗೂ ಸಿಮ್‌ ಕಾರ್ಡ್‌ಗಳನ್ನು ಐವರು ಆರೋಪಿಗಳು ಹಂಚಿಕೊಂಡು, ಆಗಾಗ್ಗೆ ತಮ್ಮಲ್ಲೇ ಬದಲಾಯಿಸಿಕೊಂಡು ಬಳಸುತ್ತಿದ್ದರು. ಇದೇ ನಕಲಿ ನಂಬರ್‌ಗಳನ್ನು ಬಳಸಿ 
ಫೇಸ್‌ಬುಕ್‌ ಖಾತೆ ತೆರಯಲಾಗಿತ್ತು ಎಂಬುದು ಎನ್‌ಐಎ ತನಿಖೆಯಲ್ಲಿ ಗೊತ್ತಾಗಿದೆ.

ಬಲೆಗೆ ಬಿದ್ದಿದ್ದು ಮೊಬೈಲ್‌ ನಂಬರ್‌ನಿಂದ!: 2016ರ ನವೆಂಬರ್‌ 1ರಂದು ಕೇರಳದ ಮಣಪ್ಪುರಂ ಕೋರ್ಟ್‌ ಆವರಣ 
ದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಿಂದ ತನಿಖೆಯನ್ನು ಚುರುಕುಗೊಳಿಸಿದ ರಾಷ್ಟ್ರೀಯ ತನಿಖಾ ದಳ ತಂಡಕ್ಕೆ, ಘಟನಾ ಸ್ಥಳದಲ್ಲಿ ಶಂಕಿತ ಉಗ್ರಗುಂಪಿಗೆ ಸಂಬಂಧಿಸಿದ ಕೆಲವು ಪತ್ರಗಳು ಹಾಗೂ ಪೆನ್‌ ಡ್ರೈವ್‌ ಸಿಕ್ಕಿದ್ದವು. ಈ ಪೆನ್‌ಡ್ರೈವ್‌ ಅನ್ನು ಪರಿಶೀಲಿಸಿದಾಗ, ಮೊದಲು ನಡೆದಿದ್ದ 4 ಬಾಂಬ್‌ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಒಂದು ನಕಲಿ ಫೇಸ್‌ಬುಕ್‌ ವಿಳಾಸ, ಕೊಚ್ಚಿ ಪೊಲೀಸ್‌ ಕಮಿಷನರ್‌ ಕಾಲ್‌ ಸೆಂಟರ್‌ಗೆ ಬೆದರಿಕೆ ಸಂದೇಶ ರವಾನಿಸಿದ ಮೊಬೈಲ್‌ ಸಂಖ್ಯೆ ಬಗ್ಗೆ ವಿವರ ಗೊತ್ತಾಯಿತು.

ಆಗಸ್ಟ್‌ 1ರಂದು (ಮೈಸೂರು ನ್ಯಾಯಾಲಯ ಸ್ಫೋಟ) ಅಬ್ಟಾಸ್‌ ಅಲಿ ಬಳಸುತ್ತಿದ್ದ ಮೊಬೈಲ್‌ ನಂಬರ್‌ಗೆ ಖಾಲಿ ಸಂದೇಶವೊಂದು ರವಾನೆಯಾಗಿತ್ತು. ಆ ಬಳಿಕ ಸ್ವಿಚ್‌ ಆಫ್ ಆಗಿದ್ದ ನಂಬರ್‌ ಪುನಃ ನ.1ರಂದು ಕೊಚ್ಚಿಯಲ್ಲಿ ಟವರ್‌
ಲೊಕೇಶನ್‌ ತೋರಿಸುತ್ತಿತ್ತು. ಈ ಮಹತ್ವದ ಸುಳಿವು ಆಧರಿಸಿಯೇ, ಮಧುರೈನ ಕೆ.ಪುದೂರ್‌ ನಿವಾಸಿ ಮೂರನೇ ಆರೋಪಿ ಮೊಹಮದ್‌ ಅಯೂಬ್‌ನನ್ನು 2016 ನ.28ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದ ಐವರು ಆರೋಪಿಗಳು ಸಿಕ್ಕಿಬಿದ್ದಿದ್ದರು.

ಟಾಪ್‌ ಆಪ್‌ ರೀಚಾರ್ಜ್‌
ಮೊಬೈಲ್‌ ನಂಬರ್‌ ಜಾಡು ಹಿಡಿದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದಾಗ, ಅಸಲಿ ಆರೋಪಿಯ ಬದಲಿಗೆ ಅಮಾಯಕನೊಬ್ಬನ ವಿಳಾಸ ತೋರಿಸಿತ್ತು. ಈ ತಂತ್ರ ವಿಫ‌ಲವಾಗುತ್ತಿದ್ದಂತೆ, ಯಾರ ವಿಳಾಸದಲ್ಲಿ ಈ ನಂಬರ್‌ ತೆಗೆದುಕೊಳ್ಳಲಾಗಿದೆ ಎಂದು ತನಿಖೆಗಿಳಿದ ಎನ್‌ಐಎಗೆ ಮತ್ತೂಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂದಿತು.

ಮೈಸೂರು ಬಾಂಬ್‌ ಸ್ಫೋಟ ಪ್ರಕರಣದ ವೇಳೆ 9 ಅಂಕೆಯಿಂದ ಆರಂಭವಾಗಿದ್ದ ನಂಬರಿನ ಸಿಮ್‌ ಕಾರ್ಡ್‌ ಕರೆ ವಿವರ (ಸಿಡಿಆರ್‌) ಪರಿಶೀಲಿಸುತ್ತಿದ್ದ ಎನ್‌ಐಎ ತಂಡಕ್ಕೆ ಮೈಸೂರಿನಲ್ಲಿ 20 ರೂ. ಟಾಪ್‌ ಆಪ್‌ ರೀಚಾರ್ಜ್‌ ಮಾಡಿಸಿಕೊಂಡಿದ್ದ ಬಗ್ಗೆ ಮಾಹಿತಿ ಲಭಿಸಿತ್ತು.

Trending videos

Back to Top