ಹಳ್ಳಕ್ಕೆ ಉರುಳಿದ ಐರಾವತ: ಏಳು ಸಾವು

Team Udayavani, Jan 14, 2018, 6:00 AM IST

13BNP-(10).jpg

ಹಾಸನ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ಹಾಸನ ತಾಲೂಕು ಶಾಂತಿಗ್ರಾಮ ಸಮೀಪ ರಾಷ್ಟ್ರೀಯ ಹೆದ್ದಾರಿ -75 ರಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು 7 ಜನರು ಸಾವನ್ನಪ್ಪಿ, 33 ಜನರು ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.

ಬೆಂಗಳೂರಿನಿಂದ ಶುಕ್ರವಾರ ರಾತ್ರಿ 11.45 ಗಂಟೆಗೆ ಹೊರ ಐರಾವತ ಬಸ್‌ ಶನಿವಾರ ಮುಂಜಾನೆ 3.30 ರ ವೇಳೆ ಶಾಂತಿಗ್ರಾಮ ಸಮೀಪದ ಕಾಲೇಜು ಮುಂಭಾಗ ಕೃಷಿ ಕಾಲೇಜು ರಸ್ತೆ ಬದಿಯ ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದಿದೆ. ಬಸ್‌ನಲ್ಲಿ ಒಟ್ಟು 43 ಜನರು ಪ್ರಯಾಣಿಸುತ್ತಿದ್ದು, ಬಸ್‌ ಚಾಲಕ, ನಿರ್ವಾಹಕ ಸೇರಿ 7 ಜನರು ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ 30 ಜನರು ಹಾಸನದ ಎನ್‌ಡಿಆರ್‌ಕೆ ಖಾಸಗಿ ಆಸ್ಪ$ತ್ರೆಯಲ್ಲಿ 6 ಜನರು ಹಾಸನದ ವೈದ್ಯಕೀಯ ಕಾಲೇಜು ಆಸ್ಪ$ತ್ರೆಯಲ್ಲಿ  ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು, ತೀವ್ರವಾಗಿ ಗಾಯಗೊಂಡವರನ್ನು ಬೆಂಗಳೂರು ಮತ್ತು ಮಂಗಳೂರಿನ ಆಸ್ಪ$ತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿದೆ.

ಮೃತರು ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕು ಗಂಡಿಬಾಗಿಲು ಗ್ರಾಮದ ಸೋನಿಯಾ (28), ಡಯಾನಾ (20), ಬಿಜೋ (26), ಧರ್ಮಸ್ಥಳದ ರಾಜೇಶ್‌ಪ್ರಭು (36) ಬೆಂಗಳೂರಿನ ಗಂಗಾಧರ್‌ (55), ಬಸ್‌ ಚಾಲಕ ಶಿವಪ್ಪ ಛಲವಾದಿ (42), ನಿರ್ವಾಹಕ ಲಕ್ಷ¾ಣ (45) ಎಂದು ಗುರ್ತಿಸಲಾಗಿದೆ. ಮೃತ ಸೋನಿಯಾ ಅವರ ಪತಿ ಥಾಮಸ್‌ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರಿಗೆ ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಾದರ್‌ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೃತರಲ್ಲಿ  ಸೋನಿಯಾ, ಡಯಾನ, ಬಿಜೋ ಒಂದೇ ಗ್ರಾಮದ ಅಕ್ಕ – ಪಕ್ಕದ ಮನೆಯವರು ಹಾಗೂ ಸಂಬಂಧಿಗಳು ಎಂದು ತಿಳಿದು ಬಂದಿದೆ.

ಡಯಾನ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ. ಆಕೆ ಬೆಂಗಳೂರಿನ ಸೆಂಟ್‌ಜಾನ್‌ ವೈದ್ಯಕೀಯ ಕಾಲೇಜಿನಲ್ಲಿ  ಪ್ರಥಮ ವರ್ಷದ ಫಿಸಿಯೋಥೆರಫಿ ಅಧ್ಯಯನ ಮಾಡುತ್ತಿದ್ದರು. ಬಿಜೋ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ ಎಂದು ತಿಳಿದು ಬಂದಿದೆ. ಸೋನಿಯಾ ತವರೂರು ಸಕಲೇಶಪುರ ತಾಲೂಕು ಮಾರನಹಳ್ಳಿ, ಅವರು ಗಂಡಿಬಾಗಿಲು ಗ್ರಾಮದ ಥಾಮಸ್‌ ಅವರನ್ನು ವಿವಾಹವಾಗಿದ್ದಾರೆ. ಥಾಮಸ್‌ ಬೆಂಗಳೂರಿನಲ್ಲಿ  ಉದ್ಯೋಗದಲ್ಲಿದ್ದು,  ಈ ನಾಲ್ವರೂ ಸ್ವಗ್ರಾಮ ಗಂಡಿಬಾಗಲು ಗ್ರಾಮಕ್ಕೆ ಹೊರಟಿದ್ದರು.

ಮೃತ ಚಾಲಕ ಶಿವಪ್ಪ  ಛಲವಾದಿ ಅವರು ಸಂಸ್ಥೆಯಲ್ಲಿ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇದುವರೆಗೂ ಅಪಘಾತ ರಹಿತ ಸೇವೆ ಸಲ್ಲಿಸಿದ್ದಾರೆ. ಈ ಮಾರ್ಗಕ್ಕೆ ಹೊಸದಾಗಿ ಅವರು ನಿಯೋಜನೆಯಾಗಿದ್ದರು  ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕ ಕಿಶೋರ್‌ ಜಾಣ್ಮೆ : ಬಸ್‌ ಅಪಘಾತಕ್ಕೀಡಾಗುವ ಸಂದರ್ಭದಲ್ಲಿ  ಪ್ರಯಾಣಿಕರು ನಿದ್ರೆಯಲ್ಲಿದ್ದರು. ಬಸ್‌ ಅ‌ಗಾಘಕ್ಕೀಡಾದ ನಂತರವೇ ಬಹುತೇಕ ಪ್ರಯಾಣಿಕರು ಎಚ್ಚರಗೊಂಡಿದ್ದಾರೆ. ಬಸ್‌ ಉರುಳಿ ಬಿದ್ದಿದ್ದರಿಂದ ಪ್ರಯಾಣಿಕರು ಕತ್ತಲೆಯಲ್ಲಿ  ಹೊರ ಬರಲೂ ತಕ್ಷಣಕ್ಕೆ ಸಾಧ್ಯವಾಗಿಲ್ಲ. ಆದರೆ ಕಿಶೋರ್‌ ಎಂಬ ಪ್ರಯಾಣಿಕರು ತನ್ನ ಪಕ್ಕದಲ್ಲಿದ್ದ ಗ್ಲಾಸ್‌ ಒಡೆಯಲು ಸಾಧ್ಯವಾಗದಿದ್ದಾಗ ಚಾಲನ ಸೀಟಿನ ಬಳಿಗೆ ಸಾಗಿ ಅಲ್ಲಿಂದ ಹೊರಗೆ ಬಂದು ರಸ್ತೆಗೆ ಬಂದು ಕೂಗಿಕೊಂಡಿದ್ದಾರೆ. ಆಗ ವಾಹನಗಳಲ್ಲಿ ಬರುತ್ತಿದ್ದವರು ಆಕ್ಕ ಪಕ್ಕದವರು ಸ್ಥಳಕ್ಕೆ ಬಂದು ನೆರವು ನೀಡಿದ್ದಾರೆ. ಅಪಘಾತ ಸಂಭವಿಸಿದ ಸುಮಾರು ಅರ್ಧಗಂಟೆಯೊಳಗೆ ಹಾಸನದಿಂದ ಆ್ಯಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪ$ತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿವೆ. ಎಸ್ಪಿ$ ರಾಹುಲ್‌ ಕುಮಾರ್‌ ಅವರೂ ಸಿಬ್ಬಂದಿಯೊಂದಿಗೆ ಅರ್ಧಗಂಟೆಯೊಳಗೆ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಗಳಲ್ಲಿ ನಿರತರಾದರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ತಿಳಿಸಿದರು.

ಸ್ಥಳೀಯರಿಗೆ ಗೊತ್ತಾಗಲೇ ಇಲ್ಲ ! : ಬಸ್‌ ಉರುಳಿ ಬಿದ್ದ ಭಾರೀ ಶಬ್ದವು ಕೃಷಿ ಕಾಲೇಜು ಸುತ್ತಮುತ್ತಲಿನ ಜನರಿಗೆ ಕೇಳಿಸಿತೆಂದು, ಆದರೆ ರಸ್ತೆಯಲ್ಲಿ  ನೋಡಿದಾಗ ವಾಹನಗಳು ಸಂಚರಿಸುತ್ತಿದ್ದರಿಂದ ಬೇರೇನೋ ಶಬ್ದವಿರಬಹುದೆಂದು ಸ್ಥಳಕ್ಕೆ ಹೋಗಿಲ್ಲವೆನ್ನಲಾಗಿದೆ. ಆದರೆ ಕೆಲ ಸಮಯದ ನಂತರ ಆ್ಯಂಬುಲೆನ್ಸ್‌ಗಳ ಓಡಾಟ ಆರಂಭವಾದಾಗ ಅಪಘಾತ ಸಂಭಿವಿದ್ದು ತಿಳಿದು ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಕ್ಕೆ ಸಹಕರಿಸಿದರು ಎಂದು ತಿಳಿದು ಬಂದಿದೆ.

ಉತ್ತಮ ರಸ್ತೆಯಿದ್ದರೂ ಅಪಘಾತ !: ಬೆಂಗಳೂರು – ಹಾಸನ ನಡುವೆ ಚತುಷ್ಪ$ಥ ರಸ್ತೆಯಿದ್ದು, ಬಸ್‌ ಅಪಘಾತಕ್ಕೀಡಾದ ಸ್ಥಳ ಅಪಘಾತ ವಲಯವಲ್ಲ. ಬಸ್‌ನ ವೇಗ 59 ಕಿ.ಮೀ.ದಲ್ಲಿದ್ದರೂ ಬಸ್‌ ಉರುಳಿ ಬಿದ್ದಿರುವುದನ್ನು ಗಮನಿಸಿದರೆ ಚಾಲಕ ನಿದ್ರೆಯ ಮಂಪರಿನಲ್ಲಿದ್ದು  ಅಜಾಗರೂಕತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಬಸ್‌ ರಸ್ತೆ ಬದಿಗೆ ಬಂದು ಕೆಲ ದೂರ ಸಾಗಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿ ಬಿದ್ದಿದೆ.

ಎದುರಿನಿಂದ ಬಂದ ವಾಹನಗಳು ಡಿಕ್ಕಿ ಹೊಡೆದ ಪ್ರಕರಣಗಳನ್ನು ಹೊರತುಪಡಿಸಿದರೆ ಐರಾವತ ಬಸ್‌ಗಳು ಅಪಘಾತಕ್ಕೀಡಾಗುವದು ವಿರಳ. ಆದರೂ ಬಸ್‌ ಅಪಘಾತಕ್ಕೀಡಾಗಿರುವುದು ಅಚ್ಚರಿ ಮೂಡಿಸಿದೆ. ಬಸ್‌ ಸುವ್ಯವಸ್ಥಿತಿ ಸ್ಥಿತಿಯಲ್ಲಿದ್ದು ,ಅದರ ಅರ್ಹತಾ ಅವಧಿ ಮುಂದಿನ ಏಪ್ರಿಲ್‌ ಅಂತ್ಯದವರೆಗೂ ಇದೆ. ಬಸ್‌ ನ್ಯೂ ಇಂಡಿಯಾ ಇನ್ಸೂರೆನ್ಸ್‌ನಿಂದ ವಿಮೆ ಪಡೆದಿದೆ.

ಟಾಪ್ ನ್ಯೂಸ್

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.