CONNECT WITH US  

ಪತ್ರಕರ್ತನ ಶವ ಕಾರ್ಪೋರೇಷನ್‌ ವಾಹನದಲ್ಲಿ ಸಾಗಾಟ !

ಮರಕ್ಕೆ ಬೈಕ್‌  ಢಿಕ್ಕಿ: ಖಾಸಗಿ ವಾಹಿನಿಯ ಯುವ ವರದಿಗಾರ ದುರ್ಮರಣ 

ಹಾವೇರಿ : ಹಾನಗಲ್‌ನ ಗಂಡೂರು ಬಳಿ  ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅವಘಡದಲ್ಲಿ ಸುದ್ದಿ ಟಿವಿಯ ಶಿರಸಿಯ  ವರದಿಗಾರ ಮೌನೇಶ ಪೋತರಾಜ  ದಾರುಣವಾಗಿ  ಸಾವನ್ನಪ್ಪಿದ್ದಾರೆ. 

28 ರ ಹರೆಯ ಪೋತರಾಜ ಅವರು ಸುದ್ದಿ ಟಿವಿಯ ಶಿರಸಿ ವರದಿಗಾರರಾಗಿದ್ದು ರಾಜ್ಯ ಮಟ್ಟದ ಸಮಾರಂಭದ ವರದಿಯೊಂದನ್ನು ನೀಡಿ  ತನ್ನ ಮನೆಯಾದ ಹಾವೇರಿಯ ಛಬ್ಬಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ದಟ್ಟ ಮಂಜು ಕವಿದಿದ್ದ ಕಾರಣ  ರಸ್ತೆ ಕಾಣದೇ ಬೈಕ್‌ ಮರಕ್ಕೆ ಢಿಕ್ಕಿಯಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. 

ಹಾನಗಲ್‌ ಪೊಲೀಸರು ಸ್ಥಳಕ್ಕಾಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಕಾರ್ಪೋರೇಷನ್‌ ವ್ಯಾನ್‌ನನಲ್ಲಿ ಶವ ಸಾಗಾಟ!

ಪೋತನೀಸ ಅವರ ಶವವನ್ನು ಕಸ ಸಾಗಿಸುವ ಹಾನಗಲ್‌ ಪುರಸಭೆಯ ಟ್ರ್ಯಾಕ್ಟರ್‌ನಲ್ಲಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ ಪೊಲೀಸರ ಕ್ರಮಕ್ಕೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೊಶ ವ್ಯಕ್ತವಾಗಿದೆ. 

ಬೆಳಗಾವಿ ಜಿಲ್ಲೆಯ ನಂದಗಡ ಬಳಿ ಶನಿವಾರ ತಡರಾತ್ರಿ ಕಾರು  ಮರಕ್ಕೆ ಗುದ್ದಿ ಸಂಭವಿಸಿದ ಭೀಕರ ಅವಘಡದಲ್ಲಿ  ಹಿರಿಯ ಪತ್ರಕರ್ತ ಡಾ ವಿರೇಶ ಹಿರೇಮಠ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.  ದುರ್ಘ‌ಟನೆಯ ವೇಳೆ ಕಾರಿನಲ್ಲಿದ್ದ ಪತ್ನಿ ಗೌರಿ  ಮತ್ತು ಕಾರು ಚಾಲಕ ಸುನೀಲ್  ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Trending videos

Back to Top