ಮಲೇಷಿಯಾ ಮರಳು ಮಾರಾಟ ನಾಳೆಯಿಂದ 


Team Udayavani, Jan 21, 2018, 6:15 AM IST

MSIL-sand.jpg

ಬೆಂಗಳೂರು: ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ ದೇಶದಲ್ಲೇ ಮೊದಲ ಬಾರಿಗೆ ವಿದೇಶಿ ಮರಳು ಆಮದು ಮಾಡಿಕೊಂಡು ಬ್ರಾಂಡ್‌ ಸೃಷ್ಟಿಸಿ ಮಾರಾಟಕ್ಕೆ ಮುಂದಾಗಿದ್ದು, ಬೆಂಗಳೂರು ಸಮೀಪದ ಬಿಡದಿಯಲ್ಲಿ ಸಂಸ್ಥೆಯ ಯಾರ್ಡ್‌ನಲ್ಲಿ ಸೋಮವಾರದಿಂದ ನೈಸರ್ಗಿಕ ನದಿ ಮರಳಿನ ಮೂಟೆ ಮಾರಾಟ ಆರಂಭವಾಗಲಿದೆ.

ಮಲೇಷಿಯಾದಿಂದ ಆಮದು ಮಾಡಿಕೊಂಡಿರುವ ನೈಸರ್ಗಿಕ ನದಿ ಮರಳಿನ 50 ಕೆ.ಜಿ.ಚೀಲದ ಬೆಲೆ ಬೆಂಗಳೂರಿನಲ್ಲಿ 200 ರೂ.ಇದೆ. ಜಿಎಸ್‌ಟಿ, ಗಣಿ ಇಲಾಖೆಗೆ ಪಾವತಿಸುವ ಶುಲ್ಕ ಹಾಗೂ ಆಮದು ಸುಂಕ ಸೇರಿ ಪ್ರತಿ ಟನ್‌ಗೆ 4000 ರೂ.ನಿಗದಿ ಪಡಿಸಿದೆ. ಅಂತರಕ್ಕೆ ಅನುಗುಣವಾಗಿ 100-200 ರೂ. ಏರಿಳಿತವಾಗಲಿದೆ. ಜನವರಿ ಕೊನೆಯ ವಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ನಂತರ ಕೆ.ಆರ್‌.ಪುರದ ಚನ್ನಸಂದ್ರದಲ್ಲಿ ಮರಳು ಮೂಟೆ ಮಾರಾಟ ಆರಂಭಿಸಲು ಎಂಎಸ್‌ಐಎಲ್‌ ಸಿದಟಛಿತೆ ನಡೆಸಿದೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ.ಪ್ರಕಾಶ್‌, ರಾಜ್ಯದಲ್ಲಿ ಮರಳಿನ ಕೊರತೆಯಿಂದಾಗಿ ಮರಳು ಮಾರಾಟ ದಂಧೆ ಶುರುವಾಗಿತ್ತು. ಹಲವೆಡೆ ಜಿಲ್ಲಾಧಿಕಾರಿಗಳು,
ಉಪವಿಭಾಗಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ ಕೂಡ ನಡೆದಿತ್ತು. ಆ ಹಿನ್ನೆಲೆಯಲ್ಲಿ ಜನರಿಗೆ ನೈಸರ್ಗಿಕ ನದಿ ಮರಳನ್ನು ನೇರವಾಗಿ ಪೂರೈಸುವ ಕಾರ್ಯಕ್ಕೆ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು.

ಮಲೇಷಿಯಾದಿಂದ ಆಂಧ್ರ ಪ್ರದೇಶದ ಕೃಷ್ಣಪಟ್ಟಣಂಗೆ ಹಡಗಿನಲ್ಲಿ ಮರಳು ಪೂರೈಕೆಯಾಗಲಿದೆ. ನಂತರ ಅಲ್ಲೇ ಚೀಲದಲ್ಲಿ ಭರ್ತಿಯಾಗಿ ರೈಲಿನಲ್ಲಿ ಬೆಂಗಳೂರು ಸೇರಿ ಇತರೆಡೆಗೆ ಪೂರೈಕೆಯಾಗಲಿದೆ. ಮಲೇಷಿಯಾದಿಂದ ಕೃಷ್ಣಪಟ್ಟಣಂಗೆ ಬರುವ ಒಂದು ಟನ್‌ ಮರಳಿಗೆ 2,300 ರೂ. ತಗಲುತ್ತದೆ. ಬಳಿಕ ಅಲ್ಲೇ ಚೀಲಕ್ಕೆ ಭರ್ತಿಯಾಗಲಿದೆ. ನಂತರ ರೈಲಿನಲ್ಲಿ ಬೆಂಗಳೂರಿಗೆ ಸಾಗಿಸಲು ಟನ್‌ಗೆ 1,100 ರೂ. ವೆಚ್ಚವಾಗಲಿದೆ. ಶೇ.5ರಷ್ಟು ಜಿಎಸ್‌ಟಿ ಪಾವತಿಸಲಾಗುತ್ತದೆ. ಜತೆಗೆ ಗಣಿ ಇಲಾಖೆಗೆ ಪ್ರತಿ ಟನ್‌ಗೆ 60 ರೂ. ಪಾವತಿಸಲಾಗುತ್ತದೆ. 100ರಿಂದ 150 ರೂ.ಲಾಭವಿಟ್ಟುಕೊಂಡು ಒಟ್ಟಾರೆ 4,000 ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಎಂಎಸ್‌ಐಎಲ್‌ ಮಾತ್ರವಲ್ಲದೇ ಆರು ಸಂಸ್ಥೆಗಳು ವಿದೇಶಿ ಮರಳು ಆಮದಿಗೆ ನೋಂದಣಿ ಮಾಡಿಕೊಂಡಿವೆ. ಬರ್ಮಾ,
ಬಾಂಗ್ಲಾದೇಶ, μಲಿಫೈನ್ಸ್‌ ಇತರೆಡೆಯಿಂದಲೂ ಮರಳು ಲಭ್ಯತೆ ಇದೆ. ಎಂಎಸ್‌ಐಎಲ್‌ ಮರಳು ಯಾವುದಕ್ಕೂ ಪರ್ಯಾಯವಲ್ಲ. ಯಾರು ಬೇಕಾದರೂ ಮರಳು ಆಮದು ಮಾಡಿಕೊಂಡು ಮಾರಾಟ ಮಾಡಬಹುದಾಗಿದೆ ಎಂದರು. ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ ಉಪಸ್ಥಿತರಿದ್ದರು. ಆಯ್ದ ಜಿಲ್ಲೆಗಳಲ್ಲಿ ಕೊರತೆ: ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ನೈಸರ್ಗಿಕ ನದಿ ಮರಳುಗಾರಿಕೆಗೆ ಪರ್ಮಿಟ್‌ ನೀಡಿಲ್ಲ.

ಹಾಗಾಗಿ ಸದ್ಯ ಪರ್ಮಿಟ್‌, ಜಿಎಸ್‌ಟಿಯಿಲ್ಲದೆ ಕೆಲವೆಡೆಯಿಂದ ಮರಳು ಪೂರೈಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಮರಳು ಮೂಟೆ ಮಾರಾಟಕ್ಕೆ ಆದ್ಯತೆ ನೀಡಲಾಗಿದೆ.

ಆನ್‌ಲೈನ್‌ ಬುಕ್ಕಿಂಗ್‌ 
ರೈಲ್ವೆ ಸಂಪರ್ಕಕ್ಕೆ ಅನುಗುಣವಾಗಿ ನಗರದ ಹೊರ ಭಾಗಗಳಲ್ಲಿ ಯಾರ್ಡ್‌ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಮಂಡ್ಯ, ಮೈಸೂರು, ಹುಬ್ಬಳ್ಳಿ ಇತರೆಡೆ ಯಾರ್ಡ್‌ ಮೂಲಕ ಮಾರಾಟ ಆರಂಭಿಸಲಾಗುವುದು. ಆನ್‌ಲೈನ್‌ ಬುಕ್ಕಿಂಗ್‌ಗೆ ಕೂಡ ಅವಕಾಶವಿದೆ. ಯಾರ್ಡ್‌ ವಿಳಾಸ: ಬಿಡದಿ- ಶಿವ ಸಾಗರ ಹೋಟೆಲ್‌ ಸಮೀಪ, ಮೈಸೂರು ರಸ್ತೆ, ಮೊಬೈಲ್‌
ಸಂಖ್ಯೆ: 96069 30236- 40. ದೊಡ್ಡಬಳ್ಳಾಪುರ- ಶೀವಪುರ ಗ್ರಾಮ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ, ಮೊಬೈಲ್‌ ಸಂಖ್ಯೆ- 96069 30231- 35.  ವೆಬ್‌ಸೈಟ್‌ www.msilonline.com

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.