CONNECT WITH US  

ಅರುಣಾಚಲ ಪ್ರದೇಶದಲ್ಲಿ ಶಿಗ್ಗಾವಿ ಯೋಧ ಹುತಾತ್ಮ

ಶಿಗ್ಗಾವಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಮುಗಳಿ ಗ್ರಾಮದ ಯೋಧರೊಬ್ಬರು ಶುಕ್ರವಾರ ಹುತಾತ್ಮರಾಗಿದ್ದಾರೆ.

ಯೋಧ ಚಂದ್ರು ಬಸಪ್ಪ ಡವಗಿ (35) ಮೃತಪಟ್ಟಿರುವ ಬಗ್ಗೆ ಸೇನೆಯಿಂದ ದೂರವಾಣಿ ಮೂಲಕ ಮಾಹಿತಿ ಬಂದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಚಂದ್ರುವಿಗೆ ತಂದೆ ಬಸಪ್ಪ, ತಾಯಿ ಬಸವಣ್ಣೆವ್ವ, ಪತ್ನಿ ಶಿಲ್ಪಾ, ಇಬ್ಬರು ಪುತ್ರಿಯರಿದ್ದು ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ. ಚಂದ್ರು ಒಂದು ತಿಂಗಳು ರಜೆ ಪಡೆದು ಡಿಸೆಂಬರ್‌ 2ನೇ ವಾರ ಸ್ವಗ್ರಾಮಕ್ಕೆ ಬಂದು ಜ. 29ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಗುವಾಹಟಿ ಮೂಲಕ ಸೇವೆಗೆ ತೆರಳಿದ್ದರು. 2002ರ ಅಕ್ಟೋಬರ್‌ನಲ್ಲಿ ಸೇನೆಗೆ ಸೇರ್ಪಡೆಯಾಗಿದ್ದು, ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2019ರ ಅಕ್ಟೋಬರ್‌ನಲ್ಲಿ ಸೇವೆ ಪೂರ್ಣಗೊಳಿಸಿ ಸ್ವಗ್ರಾಮಕ್ಕೆ ಮರಳಲು ಯೋಚಿಸಿದ್ದರು ಎನ್ನಲಾಗಿದೆ. 

ಕುಟುಂಬದವರಿಗೆ ಬಂದ ಕರೆ ಆಧಾರದಲ್ಲಿ ಸ್ಥಳೀಯರೇ ಆತನ ಸ್ನೇಹಿತರಿಗೆ ಕರೆ ಮಾಡಿ ತಾಪಮಾನ ಶೂನ್ಯ ಡಿಗ್ರಿಗೆ ಕುಸಿದು, ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದು, ಗ್ರಾಮದಲ್ಲಿ ಶೋಕ ಆವರಿಸಿದೆ. ಶಿಗ್ಗಾವಿ ತಹಶೀಲ್ದಾರ್‌ ಶಿವಾನಂದ ರಾಣೆ, ಪೊಲೀಸರು ಧಾವಿಸಿದ್ದು, ಗ್ರಾಮದ ಶಾಲಾ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಆರಂಭಿಸಿದ್ದಾರೆ.  

Trending videos

Back to Top