CONNECT WITH US  

ಬಿ.ಜಿ. ಬಣಕಾರ ನಿಧನ

ಹಿರೇಕೆರೂರ: ಹಿರಿಯ ಸಹಕಾರಿ ಧುರೀಣ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಬಿ.ಜಿ. ಬಣಕಾರ (91) ಬುಧವಾರ ರಾತ್ರಿ ನಿಧನರಾದರು.

ಮೃತರಿಗೆ ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವಿದೆ. ಫೆ.8ರಂದು ಮಧ್ಯಾಹ್ನ 3 ಗಂಟೆಗೆ ಹಿರೇಕೆರೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬಿ.ಜಿ. ಬಣಕಾರ ಕೆಲ ದಿನ ಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದರು.

ಬುಧವಾರ ರಾತ್ರಿ 9 ಗಂಟೆ ಹೊತ್ತಿಗೆ ಅಸ್ವಸ್ಥರಾಗುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾ ಗಿತ್ತು. ಬಿ.ಜಿ. ಬಣಕಾರ ಹಿರೇ ಕೆರೂರು ಕ್ಷೇತ್ರ ದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1972ರಲ್ಲಿ ಕಾಂಗ್ರೆಸ್‌, 1983ರಲ್ಲಿ ಪಕ್ಷೇತರ ಶಾಸಕ, 1985ರಲ್ಲಿ ಜನತಾ ದಳ ಶಾಸಕರಾಗಿದ್ದರು. ದೇವರಾಜ ಅರಸು ಸಂಪುಟದಲ್ಲಿ ಪಶುಸಂಗೋಪನೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.ದಿ.ರಾಮಕೃಷ್ಣ ಹೆಗಡೆಯವರ ಆಡಳಿತಾವಧಿಯಲ್ಲಿ ವಿಧಾನ ಸಭಾಧ್ಯಕ್ಷರಾಗಿ ಕಾರ್ಯನಿರ್ವ ಹಿಸಿದ್ದರು. ಉತ್ತಮ ಸಂಸದೀಯ ಪಟು, ರಾಜಕೀಯ ಮುತ್ಸದ್ದಿಯಲ್ಲದೆ, ಸಹಕಾರ ಕ್ಷೇತ್ರದಲ್ಲೂ ಬಣಕಾರ ಅಪಾರ ಕೊಡುಗೆ ನೀಡಿದ್ದರು.


Trending videos

Back to Top