ಮೀನು ಸಂಸ್ಕರಣಾ ಘಟಕಗಳ ಮೇಲೆ IT ದಾಳಿ; ಅಘೋಷಿತ ಆಸ್ತಿ ಪತ್ತೆ
Team Udayavani, Feb 12, 2018, 4:40 PM IST
ಬೆಂಗಳೂರು/ಉಡುಪಿ/ಮಂಗಳೂರು:ಬೆಂಗಳೂರು, ಉಡುಪಿ, ಮಂಗಳೂರು, ಹುಬ್ಬಳ್ಳಿ, ಗೋವಾ ಸೇರಿದಂತೆ 5 ರಾಜ್ಯಗಳ ವಿವಿಧ ಮೀನುಗಾರಿಕಾ ಸಂಸ್ಕರಣಾ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 185 ಕೋಟಿಗೂ ಅಧಿಕ ಮೊತ್ತದ ಅಘೋಷಿತ ಆಸ್ತಿಯನ್ನು ಪತ್ತೆ ಹಚ್ಚಿರುವುದಾಗಿ ಖಾಸಗಿ ಟಿವಿ ಚಾನೆಲ್ ವರದಿ ತಿಳಿಸಿದೆ.
ಸಾಲ ತೋರಿಸಿ ತೆರಿಗೆ ವಂಚಿಸಿದ್ದ ಮೀನು ಸಂಸ್ಕರಣಾ ಘಟಕಗಳ ಮೇಲೆ ಸುಮಾರು 150ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಫೆಬ್ರುವರಿ 8ರಿಂದ 4 ದಿನಗಳ ಕಾಲ ಐಟಿ ಅಧಿಕಾರಿಗಳು ಮಂಗಳೂರು, ಉಡುಪಿ, ಬೆಂಗಳೂರು, ಹುಬ್ಬಳ್ಳಿ, ಗೋವಾ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದರು. ಅಲ್ಲದೇ 88 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಮತ್ಸೋದ್ಯಮಿಗಳು, ಮಧ್ಯವರ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದೃಷ್ಟಿ ನೆಟ್ಟಿದ್ದು, ಬೇನಾಮಿ ಹೆಸರಿನಲ್ಲಿ ಮೀನುಗಾರಿಕೆ ವಹಿವಾಟು ನಡೆಸುತ್ತಿರುವುದನ್ನು ಪತ್ತೆ ಹಚ್ಚಲು ಮುಂದಾಗಿದೆ ಎಂದು ಹೇಳಿದೆ. ಬೇನಾಮಿ ಹೆಸರಿನಲ್ಲಿ ಏಜೆಂಟರಿಗೆ ಅಪಾರ ಪ್ರಮಾಣದ ಹಣ ಸಂದಾಯ ಮಾಡುತ್ತಿರುವುದು ಗಮನಕ್ಕೆ ಬಂದಿರುವುದಾಗಿ ಐಟಿ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ