CONNECT WITH US  

ಜೈಲಿಗೆ ಹೋದವರ ಮರೆತಿರಾ? 

ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್‌ ಗಾಂಧಿ ಕಟು ಪ್ರಶ್ನೆ

ದೇವದುರ್ಗ (ರಾಯಚೂರು): ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರು ರಾಜ್ಯಕ್ಕೆ ಭೇಟಿ ನೀಡುವ ಮುನ್ನ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದರು ಎಂಬ ವಿಚಾರ ಗೊತ್ತಿಲ್ಲವೇ? ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದರು.

ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಸೋಮವಾರ ಬುಡಕಟ್ಟು ಸಮುದಾಯಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು. "ಮೋದಿಯವರೇ, ನೀವು ಇಲ್ಲಿಗೆ ಬಂದಾಗ ವೇದಿಕೆಯ ಮೇಲೆ ಅತ್ತ ಇತ್ತ ನೋಡಿ. ಭ್ರಷ್ಟಾಚಾರ ಆರೋಪದಡಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಸಹಿತ ಅನೇಕ ನಾಯಕರು ನಿಮಗೆ ಕಾಣಸಿಗುತ್ತಾರೆ. ಭ್ರಷ್ಟಾಚಾರದಲ್ಲಿ ಯಡಿಯೂರಪ್ಪ ದಾಖಲೆ  ಮಾಡಿದ್ದಾರೆ. ಆದರೆ, ಐದು ವರ್ಷ ಅಧಿಕಾರ ನಡೆಸಿದರೂ ಕಾಂಗ್ರೆಸ್‌ ನಾಯಕರ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಆರೋಪಗಳಿಲ್ಲ. ನೋಟು ಅಪಮೌಲ್ಯ, ಜಿಎಸ್‌ಟಿ ಜಾರಿಗೊಳಿಸಿ ದೇಶದಲ್ಲಿ ಭ್ರಷ್ಟಾ ಚಾರಕ್ಕೆ ಅನುವು ಮಾಡಿಕೊಟ್ಟವರು ನೀವು. ಅಮಿತ್‌ ಶಾ ಮಗ 50 ಸಾವಿರ ರೂ. ಬಂಡವಾಳ ಹೂಡಿ ಕೋಟ್ಯಂತರ ರೂ.ಗಳಿಸಿದ್ದು ಹೇಗೆ? ಇದಕ್ಕೆ ನಿಮ್ಮಲ್ಲಿ ಉತ್ತರವಿಲ್ಲವೇ? ಯುದ್ಧ ವಿಮಾನ ಖರೀದಿ ಯಲ್ಲಿ ಏನೆಲ್ಲ ಹಗರಣ ಮಾಡಿದ್ದೀರಿ ಎಂಬುದು ನಮಗೆ ಗೊತ್ತಿದೆ' ಎಂದರು.

ದೇಶದಲ್ಲಿ ಎಲ್ಲಿ ನೋಡಿದರೂ ಕೇವಲ ಚೀನ ಉತ್ಪನ್ನಗಳೇ ಕಾಣಿಸುತ್ತಿವೆ. ಚೀನ ದಿನಕ್ಕೆ 50 ಸಾವಿರ ಉದ್ಯೋಗ ಸೃಷ್ಟಿಸಿದರೆ, ಮೋದಿ ದಿನಕ್ಕೆ 450 ಉದ್ಯೋಗ ಸೃಷ್ಟಿಸಿದ್ದಾರೆ. ಸಂಸತ್‌ನಲ್ಲಿ 1 ತಾಸು 40 ನಿಮಿಷ ಮಾತನಾಡಿದರೂ ಉದ್ಯೋಗ ಸೃಷ್ಟಿ ಬಗ್ಗೆಯಾಗಲಿ, ರೈತರ ಸಾಲ ಮನ್ನಾ ಬಗ್ಗೆಯಾಗಲಿ ಉಲ್ಲೇಖೀಸಿಲ್ಲ ಎಂದು ಕಿಡಿ ಕಾರಿದರು.


Trending videos

Back to Top