ನೋಟ್‌ ಬ್ಯಾನ್‌ ಐಡಿಯಾ ಆರ್‌ಬಿಐನದ್ದೂ ಅಲ್ಲ,ಜೇಟ್ಲಿಯದ್ದೂ ಅಲ್ಲ | Udayavani - ಉದಯವಾಣಿ
   CONNECT WITH US  
echo "sudina logo";

ನೋಟ್‌ ಬ್ಯಾನ್‌ ಐಡಿಯಾ ಆರ್‌ಬಿಐನದ್ದೂ ಅಲ್ಲ,ಜೇಟ್ಲಿಯದ್ದೂ ಅಲ್ಲ

ಕಲಬುರಗಿಯಲ್ಲಿ  ಕೇಂದ್ರ ಸರಕಾರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ 

ಕಲಬುರಗಿ: 'ನೋಟು ನಿಷೇಧ ಐಡಿಯಾ ಆರ್‌ಬಿಐನದ್ದೂ ಅಲ್ಲ, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರದ್ದೂ ಅಲ್ಲ ಅದೇನಿದ್ದರೂ ಆರ್‌ಎಸ್‌ಎಸ್‌ನದ್ದು' ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿ ಕಾರಿದ್ದಾರೆ. 

ನಗರದ ಎಚ್‌.ಕೆ.ಸಭಾಂಗಣದಲ್ಲಿ  ಮಂಗಳವಾರ ವ್ಯಾಪಾರೋದ್ಯಮಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ. 

'ಕೇಂದ್ರ ಸರಕಾರ ಆರ್‌ಎಸ್‌ಎಸ್‌ ಸಿದ್ದಾಂತದಂತೆ ನಡೆಯುತ್ತಿದ್ದು ಜನರ ಆಶಯದಂತೆ ನಡೆಯುತ್ತಿಲ್ಲ' ಎಂದು ಆರೋಪಿಸಿದರು. 

'ಬಿಜೆಪಿಯವರು ದೇಶಾದ್ಯಂತ ಆರ್‌ಎಸ್‌ಎಸ್‌ ವಿಚಾರ ಗಳನ್ನು  ಜಾರಿ ಗೊಳಿಸುತ್ತಿದ್ದಾರೆ' ಎಂದು ಕಿಡಿ ಕಾರಿದರು. 

'ಯಾವುದೇ ಸಾಧಕ ಬಾಧಕಗಳ ಬಗ್ಗೆ ಯೋಚಿಸಿದೆ ಆರ್‌ಎಸ್‌ಎಸ್‌ ಸೂಚನೆಯಂತೆ ನೋಟ್‌ ಬ್ಯಾನ್‌ ಮಾಡಲಾಯಿತು. ಇದರಿಂದಾಗಿ ದೇಶದ ಸಾಕಷ್ಟು ಜನರು ತೊಂದರೆ ಅನುಭವಿಸಬೇಕಾಯಿತು' ಎಂದು ವರದಿಯಾಗಿದೆ. 

Trending videos

Back to Top