CONNECT WITH US  

ರಾಹುಲ್‌ ಗಾಂಧಿ ಜವಾರಿ ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿಲ್ವಂತೆ 

ಬಿಎಸ್‌ವೈ ವಿರುದ್ಧ ಕಾಂಗ್ರೆಸ್‌ ಆಕ್ರೋಶ, ರಾಹುಲ್‌ ಉತ್ತರವಿಲ್ಲ...!

ಕಲಬುರಗಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿಲ್ಲ ಎಂದು ಕಾಂಗ್ರೆಸ್‌ ಶಾಸಕ , ಮಾಜಿ ಸಚಿವ ಶಿವರಾಜ್‌ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.

ಜವಾರಿ ಕೋಳಿ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್‌.ಯಡಿಯೂರಪ್ಪ ಅವರ ಟ್ವೀಟ್‌ಗೆ ತಿರುಗೇಟು ನೀಡಿರುವ ತಂಗಡಗಿ ರಾಹುಲ್‌ ಗಾಂಧಿ ಅವರು ಚಪಾತಿ, ಆಲೂಗಡ್ಡೆ ಪಲ್ಯ, ದಾಲ್‌, ಶಾವಿಗೆ ಬಾತ್‌ ಮತ್ತು ಪಾಯಸ ಸೇವಿಸಿದ್ದರು. ಮಾಂಸಹಾರ ಮಾಡಿರಲ್ಲಿಲ್ಲ ಎಂದು ತಿಳಿಸಿದ್ದಾರೆ. 

ರಾಗಾ ಉತ್ತರವಿಲ್ಲ.!
ಕಲಬುರಗಿಯಲ್ಲಿ ಸುದ್ದಿಗಾರರು ಕೋಳಿ ಸೇವಿಸಿ ದೇವಾಲಯಕ್ಕೆ ತೆರಳಿದ ಕುರಿತಾಗಿನ ಆರೋಪದ ಬಗ್ಗೆ ಪ್ರಶ್ನಿಸಿದಾಗ ರಾಹುಲ್‌ ಗಾಂಧಿ ಯಾವುದೇ ಉತ್ತರ ನೀಡಲಿಲ್ಲ. 

ಇದು ಚರ್ಚಿಸುವ ವಿಷಯವಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ 'ಇದು ಚರ್ಚಿಸಬೇಕಾದ ವಿಷಯವೇ ಅಲ್ಲ ಎಂದಿದ್ದಾರೆ. ಅವರು ಮಾಂಸ ತಿಂದಿದ್ದಾರೊ ಬಿಟ್ಟಿದ್ದಾರೊ ಗೊತ್ತಿಲ್ಲ, ಮಾಂಸ ತಿನ್ನುವುದು ಬಿಡುವುದು ಅವರವರಿಗೆ ಬಿಟ್ಟಿದ್ದು'ಎಂದರು. 
 

ರಾಹುಲ್‌ಗಾಂಧಿ ಕೊಪ್ಪಳದಲ್ಲಿ  ನರಸಿಂಹ ಸ್ವಾಮಿ ದೇವಾಲಯ ಸೇರಿದಂದೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದರು. 

ರಾಹುಲ್‌ ಭೇಟಿಯ ಬಳಿಕ ಟ್ವೀಟ್‌ ಮಾಡಿದ್ದ ಬಿಎಸ್‌ವೈ 'ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯೋ 10 ಪರ್ಸೆಂಟ್‌ ಸಿಎಂ ಸಿದ್ದರಾಮಯ್ಯ ಒಂದೆಡೆಯಾದರೆ, ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆಯೋ ಎಲೆಕ್ಷನ್‌ ಹಿಂದೂ ರಾಹುಲ್‌ ಗಾಂಧಿ ಮತ್ತೂಂದು ಕಡೆ. ಪ್ರತಿ ಬಾರಿ ಏಕೆ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್‌ ಧಕ್ಕೆ ತರುತ್ತಿದೆ? ಎಲ್ಲರನ್ನೂ ಸಮನಾಗಿ ಕಾಣುವುದು ಸಮಾಜವಾದ, ನಿಮ್ಮದು ಮಜಾವಾದ.' ಎಂದು ಬರೆದಿದ್ದರು. 

Trending videos

Back to Top