ಬಾಹುಬಲಿ ಮಜ್ಜನಕ್ಕೆ ಮೆರವಣಿಗೆ ಮೆರಗು

Team Udayavani, Feb 17, 2018, 8:15 AM IST

s-21.jpg

ಹಾಸನ: ಶ್ರವಣಬೆಳಗೊಳದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭ್ರಮದ ವಾತಾವರಣ, ಡೊಳ್ಳು, ಕಹಳೆ, ಭಜನೆ, ನೃತ್ಯ ತಂಡಗಳು ರಸ್ತೆಯುದ್ದಕ್ಕೂ ರಂಗು ಹರಿಸಿದ್ದವು. ಶ್ರೀ ಬಾಹುಬಲಿ ಮಹಾ ಮಸ್ತಕಾಭಿಷೇಕದ ಮುನ್ನಾದಿನ ನಡೆದ ಮಹಾ ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಕಲಾತಂಡ ಹಾಗೂ 50ಕ್ಕೂ ಹೆಚ್ಚು ಸ್ತಬ್ಧಚಿತ್ರ ಪಾಲ್ಗೊಂಡು ಅವಿಸ್ಮರಣೀಯ ದೃಶ್ಯ ವೈಭವವನ್ನು ದಾಖಲಿಸಿದವು.
ಪಂಚಕಲ್ಯಾಣ ನಗರದಲ್ಲಿ ಮೆರವಣಿಗೆಗೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಚಾಲನೆ ನೀಡಿದರು. ಶಾಸಕ ಸಿ.ಎನ್‌.ಬಾಲಕೃಷ್ಣ ಹಾಗೂ ಮಹಾಮಸ್ತಕಾಭಿಷೆಕ ಮಹೋತ್ಸವದ ವಿಶೇಷಾಧಿಕಾರಿ ವರಪ್ರಸಾದರೆಡ್ಡಿ ಅವರೂ ಲಾತಂಡಗಳೊಂದಿಗೆ ಹೆಜ್ಜೆ ಹಾಕಿ ವಾದ್ಯವೃಂದಳೊಂದಿಗೆ ಮೈಮರೆತು ನೃತ್ಯ ಮಾಡಿದರು.ಸುಮಾರು 500 ಮಂದಿ ಜೈನಧರ್ಮ ಧ್ವಜ ಹಿಡಿದು ಹೆಜ್ಜೆ ಹಾಕಿದರು, 2500ಕ್ಕೂ ಹೆಚ್ಚು ಕಲಾವಿದರು ವಿವಿಧ ಕಲಾತಂಡದಲ್ಲಿದ್ದರು, 24 ತೀರ್ಥಂಕರರ ಅಡ್ಡಪಲ್ಲಕ್ಕಿ, ಮಹಾ ಮಸ್ತಕಾಭಿಷೇಕ ಮಹೋತ್ಸವ ಲಾಂಛನ, ಕೋಲಾಟ, ಡೊಳ್ಳು ಕುಣಿತ, ಚಂಡೆವಾದ್ಯ, ಕರಾವಳಿ ಭಾಗದ ಯಕ್ಷಗಾನ ವೇಷಧಾರಿ, ಹುಲಿ ಕುಣಿತ ಹೀಗೆ ನಾನಾ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದರು.

ಮೆರವಣಿಗೆ ಸಂಚರಿಸುವ ಮಾರ್ಗಮಧ್ಯೆ ಸ್ವಯಂಸೇವರಕು ಹಾಗೂ ಸ್ಥಳೀಯರು ಉಚಿತವಾಗಿ ನೀರು, ಮಜ್ಜಗೆ ವಿತರಿಸಿದರು. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಾತಾಜಿಯವರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು, ಮೆರವಣಿಗೆ ಸಾಗುವ ರಸ್ತೆ ಬದಿಯಲ್ಲಿ ಸಾವಿರಾರು ಮಂದಿ ನಿಂತು ಕಲಾವಿದರ ಕಲಾಪ್ರದರ್ಶನ ಹಾಗೂ ಸ್ತಬ್ಧ ಚಿತ್ರವನ್ನು ಕಣ್ತುಂಬಿಕೊಂಡರು.

ದೇವೇಗೌಡ ವೃತ್ತ, ಬಾಹುಬಲಿ ತಾಂತ್ರಿಕ ಕಾಲೇಜು, ಹಾಗೂ ಪಂಚಕಲ್ಯಾಣ ನಗರಗಳಿಂದ 3 ರಸ್ತೆಗಳಲ್ಲಿ ಏಕಕಾಲಕ್ಕೆ  ಮೆರವಣಿಗೆಯು ವಿಂಧ್ಯಗಿರಿಯತ್ತ ಸಾಗಿತು. ಕಲಾತಂಡಗಳು ಸುಮಾರು 2 ತಾಸಿನಲ್ಲಿ 6 ಕಿಮೀ ಕ್ರಮಿಸಿ ವಿಂಧ್ಯಗಿರಿ ಬೆಟ್ಟದ ತಪ್ಪಲಿನಲ್ಲಿ ಸೇರುವು ಮೂಲಕ ಮೆರವಣಿಗೆ ಸಮಾಪ್ತಿಯಾಯಿತು. ಮಹಾ ಮಸ್ತಕಾಭಿಷೇಕ ಸಮಿತಿ ರಾಷ್ಟ್ರೀಯ ಅಧ್ಯಕ್ಷೆ ಸರಿತಾಜೈನ್‌, ರಾಜ್ಯ ಕಾಯಾಧ್ಯಕ್ಷ ಜಿತೇಂದ್ರಕುಮಾರ್‌, ಕಾರ್ಯದರ್ಶಿ ಸತೀಶ್‌ಚಂದ್‌ಜೈನ್‌  ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶ್ರವಣಬೆಳಗೊಳದಲ್ಲಿ ಇಂದು
ಶ್ರವಣಬೆಳಗೊಳ: ವಿಂಧ್ಯಗಿರಿಯ ಶ್ರೀ ಗೊಮ್ಮಟೇಶ್ವರನಿಗೆ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಮಹಾಮಸ್ತಾಕಾಭಿಷೇಕ ನಡೆಯುವ ಮುನ್ನ ಮುಂಜಾನೆಯಿಂದ ಪ್ರಧಾನ ಅರ್ಚಕರು ಧಾರ್ಮಿಕ ಆಚರಣೆ ನಡೆಸುವರು. ಮುಂಜಾನೆಯಿಂದ ಮಧ್ಯಾಹ್ನದವರೆಗೆ ಮಹಾಮೂರ್ತಿಗೆ ಮಹಾ ಅಭಿಷೇಕ ಮಾಡುವ ದ್ರವ್ಯಗಳನ್ನು ವಿಂಧ್ಯಗಿರಿಗೆ ಸಾಗಣಿಗೆ ಮಾಡಲಾಗುತ್ತದೆ. ಜೈನ ಮುನಿಗಳು, ಮಾತೆಯರು, ಕಳಶ ಪಡೆದಿರುವವರು ಮಧ್ಯಾಹ್ನ 1 ಗಂಟೆಯೊಳಗೆ ವಿಂಧ್ಯಗಿರಿಯ ಮೇಲೇರುವರು. ಆನಂತರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ 108 ಕಲಶಗಳ ಪೈಕಿ ಮೊದಲ ಕಳಶದಿಂದ ಜಲಾಭಿಷೇಕ ನಡೆಯಲಿದ್ದು, ಆನಂತರ 107 ಕಲಶಗಳ ಅಭಿಷೇಕ ನಡೆಯುವುದು. ಆನಂತರ ಪಂಚಾಮೃತ ಅಭಿಷೇಕ ನಡೆಯಲಿದೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.