CONNECT WITH US  

ಟಿಪ್ಪು ಆಯ್ತು ಈಗ ಬಹಮನಿ ಸುಲ್ತಾನರ ಉತ್ಸವ; ಬಿಜೆಪಿ ವಿರೋಧ

ಬೆಂಗಳೂರು:ಮುಸ್ಲಿಮ್ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಬಹಮನಿ ಸುಲ್ತಾನರ ಉತ್ಸವ ಮಾಡಲು ಹೊರಟಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ಖಿಲ್ಲಾ ಮತ್ತು ಹಫ್ತ್‌ ಗುಂಬಜ್‌ನಲ್ಲಿ ಮಾರ್ಚ್‌ 6 ರಂದು ಬಹುಮನಿ ಉತ್ಸವ ಆಚರಣೆಯ ಸಿದ್ಧತೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಗಲಭೆ ಹಬ್ಬಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಟಿಪ್ಪು ಜಯಂತಿ ಆಚರಿಸುವ ಮೂಲಕ ದಕ್ಷಿಣ ಕನ್ನಡ, ಕೊಡಗಿನಲ್ಲಿ ಗಲಭೆ ಎಬ್ಬಿಸಿದ ರಾಜ್ಯ ಸರ್ಕಾರ ಈಗ ಬಹಮನಿ ಸುಲ್ತಾನರ ಉತ್ಸವ ನಡೆಸುವ ಸಿದ್ಧತೆ ನಡೆಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದೆ ಎಂದರು.

ಸರ್ಕಾರ ಯಾವ ದಿಕ್ಕಿನತ್ತ ಹೊರಟಿದೆ ಎಂದು ಪ್ರಶ್ನಿಸಿದ ಶೋಭಾ, ಬಹಮನಿ ಸುಲ್ತಾನರು ಹಿಂದೂ ವಿರೋಧಿಗಳಾಗಿದ್ದರು. ವಿಜಯನಗರ ಸಾಮ್ರಾಜ್ಯ ನಾಶ ಮಾಡಿ, ಹಿಂದೂ ರಾಜರನ್ನು ಕೊಂದವರ ಉತ್ಸವದ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.

ನನಗೇನೂ ಗೊತ್ತಿಲ್ಲ ಎಂದ ಸಿಎಂ!

ಬಹಮನಿ ಸುಲ್ತಾನರ ಉತ್ಸವಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಲ್ಲಿಯೇ ಗೊಂದಲ ಏರ್ಪಟ್ಟಿದ್ದು, ಉತ್ಸವದ ವಿಚಾರದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಂದೆಡೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಬಹಮನಿ ಸುಲ್ತಾನರ ಉತ್ಸವ ನಡೆಸುವುದಾಗಿ ತಿಳಿಸಿದ್ದಾರೆ.

Trending videos

Back to Top