CONNECT WITH US  

ರಾಜ್ಯಕ್ಕೆ ನವಚಿಂತನೆಯ ಪೇಟೆಂಟ್‌ ಭಂಡಾರ

ರಾಜ್ಯಕ್ಕೆ ನವಚಿಂತನೆಯ ಪೇಟೆಂಟ್‌ ಭಂಡಾರ ರಾಜ್ಯದಲ್ಲಿ ನೂತನ ಆವಿಷ್ಕಾರ, ನವೋದ್ಯಮಗಳ ಅಭಿವೃದ್ಧಿಗೆ ಮಹತ್ವ ನೀಡಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ರಚನೆ, ಕೃಷಿಯಲ್ಲಿನ ಆವಿಷ್ಕಾರಗಳಿಗೆ ಅಗ್ರಿ ಇನ್ನೊವೇಷನ್‌ ಕೇಂದ್ರ ಸೇರಿ ಹಲವು ವಿನೂತನ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ರಾಜ್ಯದಲ್ಲಿ ನವೋದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಪ್ರತ್ಯೇಕ "ಇನ್‌ಕುÂಬೇಷನ್‌ ಸೆಂಟರ್‌' ನಿರ್ಮಿಸಲು ಉದ್ದೇಶಿಸಿದ್ದು, ಹಾರ್ಡ್‌ವೇರ್‌ ಉಪಕರಣಗಳು ಮತ್ತು ಸೆಮಿಕಂಡಕ್ಟರ್‌ ಚಿಪ್‌ಗ್ಳ ವಿನ್ಯಾಸ ಮತ್ತು ಅಭಿವೃಸಿಎಂ ಸಿದ್ದರಾಮಯ್ಯ,ಗಾಗಿ ಇಂಡಿಯನ್‌ ಎಲೆಕ್ಟ್ರಾನಿಕ್ಸ್‌ -ಸೆಮಿಕಂಡಕ್ಟರ್‌ ಅಸೋಸಿಯೇಷನ್‌ (ಐಇಎಸ್‌ಎ) ಸಹಕಾರದೊಂದಿಗೆ "ಸೆಮಿಕಂಡಕ್ಟರ್‌ ಫ್ಯಾಬ್‌ಲೆಸ್‌ ಆಕ್ಸಿಲೆಟರ್‌ ಲ್ಯಾಬ್‌' ಸ್ಥಾಪಿಸುವುದಾಗಿ ತಿಳಿಸಿದ್ದಾರೆ. 

ರಾಜ್ಯದಲ್ಲಿ ಸೂಕ್ತ ಕಾನೂನು ಜಾರಿಯಾಗುವವರೆಗೆ ಹೊಸ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳನ್ನು ಕಾನೂನಿನ ಚೌಕಟ್ಟಿನೊಳಗೆ ತರಲು ಸರ್ಕಾರದಿಂದಲೇ "ಲೀಗಲ್‌ ಫ್ರೆಮ್‌ವರ್ಕ್‌ ಫಾರ್‌ ಇನ್ನೊವೇಷನ್‌' ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಇದರಿಂದಾಗಿ ಅಂತಹ ತಂತ್ರಜ್ಞಾನಗಳನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದಿದ್ದಾರೆ. ಜತೆಗೆ ಪೇಟೆಂಟ್‌ಗಳ ವಿವರಗಳನ್ನು ಒಂದೆಡೆ ಸಂಗ್ರಹಿಸಿ ತಾಳೆ ಹಾಕಲು ಮತ್ತು ಪೇಟೆಂಟ್‌ ವಿನಿಮಯ ಸುಲಭಗೊಳಿಸಲು "ಪೇಟೆಂಟ್‌ ಭಂಡಾರ'
ಆರಂಭಿಸುವುದಾಗಿ ತಿಳಿಸಲಾಗಿದೆ.

ರಾಜ್ಯದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉದ್ದಿಮೆಗಳು, ನವೋದ್ಯಮಗಳ ಉತ್ತೇಜನಕ್ಕಾಗಿ ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಬಜೆಟ್‌ನಲ್ಲಿ ಒಟ್ಟು 247 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ

ತಂತ್ರಜ್ಞಾನ ಕೌಶಲ ತರಬೇತಿ ಐಟಿ ವಲಯದಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ದೀರ್ಘ‌ ಅವಧಿಯ ಹೆರಿಗೆ ರಜೆ ಅಥವಾ ವ್ಯಾಸಂಗ ರಜೆ ತೆರಳಿ ಮತ್ತೆ ಕೆಲಸಕ್ಕೆ ಹಿಂತಿರುಗಿದಾಗ ಕೆಲಸದಲ್ಲಿ ತೊಡಗಿಕೊಳ್ಳಲು ಸಮಸ್ಯೆ ಅನುಭವಿಸುತ್ತಿರುವುದು ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ಉದ್ಯೋಗ ಮತ್ತು ಆತ್ಯಾಧುನಿಕ ತಂತ್ರಜ್ಞಾನದ ಕೌಶಲ್ಯದ ಕೊರತೆಯಾಗದಂತೆ ಅವರಿಗೆ ಸಹಾಯವಾಗಲು ಕೌಶಲ್ಯ ಅಭಿವೃದ್ಧಿಯ ವಿಶೇಷ ಕಾರ್ಯಕ್ರಮ ರೂಪಿಸುವುದಾಗಿ ಸರ್ಕಾರ ತಿಳಿಸಿದೆ.

Trending videos

Back to Top