CONNECT WITH US  

ದೇವರಾಣೆಗೂ ಬಿಎಸ್‌ವೈ ಸಿಎಂ ಆಗಲ್ಲ: ಲಮಾಣಿ

ಹಾವೇರಿ: "ನಾನು ದೇವರ ಮಂತ್ರಿಯಾಗಿ (ಮುಜರಾಯಿ ಖಾತೆ ಸಚಿವ) ಹೇಳುತ್ತೇನೆ. ದೇವರಾಣೆಗೂ ಯಡಿಯೂರಪ್ಪ 
ಮುಖ್ಯಮಂತ್ರಿಯಾಗಲ್ಲ'! ಇದು ಮುಜರಾಯಿ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ನುಡಿದ ಭವಿಷ್ಯ. "ನಾನು ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಅವರ ಎಲ್ಲ ಹಗರಣ ಬಯಲಿಗೆಳೆದು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸದಿದ್ದರೆ ನನ್ನನ್ನು
ಯಡಿಯೂರಪ್ಪ ಅಂತ ಕರೆಯಬೇಡಿ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಗುರುವಾರ ನಗರದಲ್ಲಿ ನೀಡಿದ ಹೇಳಿಕೆಗೆ ಸಚಿವ ರುದ್ರಪ್ಪ ಲಮಾಣಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಯಡಿಯೂರಪ್ಪನವರು ರಾಜ್ಯದಲ್ಲಿ ಮುಂದೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಅವರ 150 ಮಿಷನ್‌ ಈಗ 50ಕ್ಕೆ ಬಂದಿದೆ.
ಅವರಿಗೂ ವಯಸ್ಸಾಗಿದ್ದು ಅರಿವು, ಮರೆವು ಆಗಿದೆ. ಹಾಗಾಗಿ ಹೆಚ್ಚು ಕಡಿಮೆ ಮಾತನಾಡುತ್ತಾರೆ. ಯಾರೂ ಅವರ ಮಾತನ್ನು
ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಹೇಳಿದರು.

ಮಾನ್ಯ ರಾಮಲಿಂಗಾರೆಡ್ಡಿಯವರೇ, ನಿಮ್ಮ ಉತ್ತರವನ್ನು ಕಣ್ಣು ತುಂಬಿಕೊಂಡೆ, ಮನಸ್ಸು ಒಪ್ಪಲಿಲ್ಲ. ಅದೇನೋ ಕ್ರೈಂ ರೇಟ್‌ 7ರಿಂದ
5 ಆಗಿದೆ ಅಂದ್ರಲ್ಲಾ? ನಿಮ್ಮ ಶಾಸಕನ ಗೂಂಡಾ ಮಗನ ಮೇಲೆ ದಾಖಲಿಸದೇ ಬಿಟ್ಟ ಹಳೆಯ ಕೇಸುಗಳ ಹಾಗೆ ಕೃಪಾಪೋಷಿತ ಪೊಲೀಸರು ಎಷ್ಟೋ ಕಾಂಗ್ರೆಸ್‌ನವರ ಪ್ರಕರಣಗಳನ್ನು ಬಿಟ್ಟ ಕಾರಣ ಕ್ರೈಂ ರೇಟ್‌ ಇಳಿದಿರಬೇಕು.

● ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top