CONNECT WITH US  

ರಾಜ್ಯಸಭೆಗೆ 1 ಸ್ಥಾನ ಬಿಟ್ಟುಕೊಡಿ: ಎಚ್ಡಿಕೆ

ಯಾದಗಿರಿ: ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಒಂದು ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಶಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯ ಒಂದು ಸೀಟು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಜತೆ ಮಾತುಕತೆ ನಡೆಯುತ್ತಿದೆ. ಕಾಂಗ್ರೆಸ್‌ನವರು ಜೆಡಿಎಸ್‌ಗೆ ಒಂದು ಸೀಟು ಬಿಟ್ಟುಕೊಡದಿದ್ದರೆ ಇಡೀ ರಾಜ್ಯ ಕಳೆದು
ಕೊಳ್ಳಬೇಕಾಗುತ್ತದೆ. ಪಾಂಡವರಿಗೆ ಐದು ಗ್ರಾಮ ಬಿಟ್ಟು ಕೊಡುವಂತೆ ಕೃಷ್ಣ ಕೌರವರಿಗೆ ಕೇಳಿದ್ದ, ಆದರೆ ಕೌರವರು ಐದು ಗ್ರಾಮಗಳನ್ನು ನೀಡದೆ ಸರ್ವನಾಶವಾದರು. ಅಂಥ ಸ್ಥಿತಿ ಕಾಂಗ್ರೆಸ್‌ಗೆ ಬರಲಿದೆ ಎಂದರು.

ಮುಂಬರುವ ವಿಧಾನಸಭೆ ಚುನಾವಣೆಗಾಗಿ 20 ಸೀಟು ಬಹುಜನ ಸಮಾಜ ಪಕ್ಷದೊಂದಿಗೆ ಒಪ್ಪಂದವಾಗಿದ್ದು, ಉಳಿದ ಸ್ಥಾನಗಳಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಲಿದೆ. ಇತ್ತೀಚೆಗೆ ಘೋಷಿಸಿದ್ದ ಜೆಡಿಎಸ್‌ ಪಟ್ಟಿಯೇ ಅಧಿಕೃತವಾಗಿದ್ದು, ಯಾವುದೇ ಅಭ್ಯರ್ಥಿಗಳ ಹೆಸರು
ಬದಲಾವಣೆ ಆಗುವುದಿಲ್ಲ ಎಂದು ಹೇಳಿದರು. 


Trending videos

Back to Top