CONNECT WITH US  

BJP MLA ಸತೀಶ್‌ ರೆಡ್ಡಿ ಬಾಮೈದ ಎಂದು ಯುವಕನ ಗೂಂಡಾಗಿರಿ 

ಆರೋಪಿ ವಿಕ್ರಂ ರೆಡ್ಡಿ

ಬೆಂಗಳೂರು: ದೊಡ್ಡವರ ಹೆಸರು ಹೇಳಿ ಸಣ್ಣ ಕೆಲಸ ಮಾಡುವುದು ಅಂದರೆ ಇದೇ ಇರಬೇಕು. ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಬಾಮೈದ ಎಂದು ಯುವಕನೊಬ್ಬ ಕ್ಯಾಬ್‌ ಚಾಲಕರೊಬ್ಬರಿಗೆ ಮಾರಣಾಂತಿಕವಾಗಿ ಥಳಿಸಿರುವ ಘಟನೆ ಬುಧವಾರ ತಡರಾತ್ರಿ ಕೋರಮಂಗಲದಲ್ಲಿ ನಡೆದಿದೆ. 

ಮಿಥುನ್‌ ರೆಡ್ಡಿ ಎಂಬ ಯುವಕ ಸೈಡ್‌ ನೀಡಲಿಲ್ಲ ಎಂಬ ಕಾರಣಕ್ಕೆ ಚಾಲಕ ತಿಪ್ಪೇಸ್ವಾಮಿ ಕಾರನ್ನು ಅಡ್ಡಗಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದು, ಎಯ್‌..ನಾನ್ಯಾರು ಗೊತ್ತಾ ? ಎಂಎಲ್‌ಎ ಸತೀಶ್‌ ರೆಡ್ಡಿ ಅವರ ಬಾಮೈದ ನನಗೆ ಸೈಡ್‌ ನೀಡಲ್ವ..ನಿನಗೆ ಇದೆ... ಎಂದು ಧಮ್ಕಿ ಹಾಕಿದ್ದಾನೆ. 

ಗಾಯಗೊಂಡಿರುವ ತಿಪ್ಪೇಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ನನಗೆ ಬಾಮೈದ ಇಲ್ಲ!
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಸತೀಶ್‌ ರೆಡ್ಡಿ ನನಗೆ ಬಾಮೈದ ಇಲ್ಲ , ನನ್ನ ಹೆಸರು ಹೇಳಿಕೊಂಡು ಈ ಕೃತ್ಯ ಎಸಗಿದ್ದಾನೆ. ಆತನಿಗೆ ಠಾಣೆಗೆ ಕರೆದೊಯ್ದು ನಾಲ್ಕು ಬಾರಿಸಿ ಬುದ್ದಿ ಕಲಿಸಿ ಎಂದು ಕಿಡಿ ಕಾರಿದ್ದಾರೆ. 

Trending videos

Back to Top