CONNECT WITH US  

ಸಂಪುಟ ನಿರ್ಣಯ ತಡೆಹಿಡಿಯಬೇಕು: ಶೋಭಾ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಕಳೆದ ಎರಡು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಹಾಗೂ ಕಳೆದ 15 ದಿನಗಳಲ್ಲಿ ಹಣಕಾಸಿನ ವ್ಯವಸ್ಥೆಯಿಲ್ಲದೆ ಆರಂಭಿಸಿ ರುವ ಕಾಮಗಾರಿ, ಯೋಜನೆಗಳನ್ನು ಕೇಂದ್ರ ಚುನಾವಣಾ ಆಯೋಗ
ತಡೆಹಿಡಿಯಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ ಎರಡು ಸಚಿವ ಸಂಪುಟ ಸಭೆಯಲ್ಲಿ ಅನುಷ್ಠಾನಗೊಳಿಸಲಾಗದ ನಿರ್ಣಯಗಳನ್ನು ಕೈಗೊಂಡಿದೆ. ಕೇವಲ ಚುನಾವಣಾ ಗಿಮಿಕ್‌ಗಾಗಿ ಸರ್ಕಾರ ಕೆಲ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರಗಳಿಂದ ಜನರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶವಿಲ್ಲದಿದ್ದರೂ ಮೂಗಿಗೆ ತುಪ್ಪ ಸವರುವ ಕೆಲಸ
ಮಾಡಿದೆ.ಹೀಗಾಗಿ, ಆಯೋಗ ಈ ನಿರ್ಧಾರಗಳನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಚುನಾವಣೆ ಸಮೀಸುತ್ತಿರುವಂತೆಯೇ ಕಳೆದ 15 ದಿನಗಳಲ್ಲಿ ಮನಬಂದಂತೆ ವರ್ಗಾವಣೆ ಮಾಡಲಾಗಿದೆ. ಗಣಿ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಠಾರಿಯಾ ಅವರನ್ನು ರಜೆ ಮೇಲೆ ತೆರಳಲು ಸೂಚಿಸಿರುವುದೇ ಇದಕ್ಕೆ ಸಾಕ್ಷಿ ಎನಿಸಿದೆ. ಎರಡು ವರ್ಷಗಳಿಂದ
ಒಂದೇ ಸ್ಥಾನದಲ್ಲಿರುವ ಅಧಿಕಾರಿಗಳನ್ನು ಮೊದಲು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್‌ ಮುಖಂಡರಿಂದ ಕಾನೂನು ಉಲ್ಲಂಘನೆ ಯಾಗುತ್ತಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹಾಗೂ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಹೀಗಾಗಿ ಕಡತ ವಿಲೇವಾರಿ ಮಾಡಲಾಗುತ್ತಿದೆ. ಶೋಭಾ ಕರಂದ್ಲಾಜೆಗೆ ಪ್ರಜಾಪ್ರಭುತ್ವದ
ರಾಜಕೀಯ ಗೊತ್ತಿಲ್ಲ. ಹೀಗಾಗಿ ಏನೇನೊ ಮಾತನಾಡುತ್ತಾರೆ.

 ಸಿದ್ದರಾಮಯ್ಯ, ಸಿಎಂ


Trending videos

Back to Top