CONNECT WITH US  

ರಾಹುಲ್‌ ಪ್ರಧಾನಿ ಆಗೋದು ತಿರುಕನ ಕನಸು: ಬಿಎಸ್‌ವೈ

ದಾವಣಗೆರೆ: ಅಖೀಲ ಭಾರತ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಮುಂದಿನ ಪ್ರಧಾನಿ ಆಗುವುದು ತಿರುಕನ ಕನಸು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಲೇವಡಿ ಮಾಡಿದ್ದಾರೆ. 

ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಮಂಗಳವಾರ ಮುಷ್ಟಿ ಧಾನ್ಯ ಅಭಿಯಾನ, ಕರುನಾಡ ಜಾಗೃತಿ ಯಾತ್ರೆ, ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ರಾಹುಲ್‌ಗಾಂಧಿಯಂತಹ ಬಚ್ಚಾನನ್ನು ಕರೆದುಕೊಂಡು ಬಂದು ಮನ ಬಂದಂತೆ ಮಾತನಾಡಿಸುತ್ತಿದ್ದಾರೆ. ರಾಹುಲ್‌ಗಾಂಧಿ ಮುಂದಿನ ಪ್ರಧಾನಿ ಆಗುವುದು ತಿರುಕನ ಕನಸು. ದೇಶದ 21 ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ಕಾರ್ಯ ದಾವಣಗೆರೆ ಜಿಲ್ಲೆಯಿಂದಲೇ ಪ್ರಾರಂಭವಾಗಲಿದೆ. ಎಲ್ಲ 8 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇವಲ ಒಂಬತ್ತು ಸೆಕೆಂಡ್‌ನ‌ ವೀಡಿಯೋ ಇಟ್ಟುಕೊಂಡು ರಾಷ್ಟ್ರೀಯ ಕಾಂಗ್ರೆಸ್‌ ಕರ್ನಾಟಕ ಚುನಾವಣಾ ಪ್ರಚಾರ ಮಾಡುತ್ತದೆ ಎನ್ನುವುದಾದರೆ ಅವರಿಗೆ ಶುಭ ಕೋರುತ್ತೇನೆ. ಹಾಗೆ ನೋಡಿದರೆ ರಾಹುಲ್‌ ಗಾಂಧಿಯವರು ಮಾಡಿರುವ ಎಡವಟ್ಟುಗಳ ಕುರಿತ ಇಂತಹ ವಿಡಿಯೋಗಳು ನಮ್ಮಲ್ಲಿ ಸಾಕಷ್ಟಿವೆ. ಒಂದು ಸಣ್ಣ ವಿಡಿಯೋದ ಗಾತ್ರ ಟ್ವೀಟರ್‌ನಲ್ಲಿ ಅಳವಡಿಸಲು ನಿಗದಿಪಡಿಸಿರುವ ಸಾಮರ್ಥ್ಯಕ್ಕಿಂತ ಹೆಚ್ಚಾಗಿವೆ.
● ಧರ್ಮೇಂದ್ರ ಪ್ರದಾನ್‌, ಕೇಂದ್ರ ಸಚಿವ

Trending videos

Back to Top