ಜಮೀರ್ ಅಹ್ಮದ್ ಜಾತಕ ಬಿಚ್ಚಿಟ್ಟ ಅಲ್ತಾಫ್ ಪಾಷಾ ಹೇಳಿದ್ದೇನು!?
Team Udayavani, Apr 2, 2018, 12:53 PM IST
ಬೆಂಗಳೂರು: ಜೆಡಿಎಸ್ ಪಕ್ಷದಿಂದ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಜಮೀರ್ ಅಹ್ಮದ್ 300 ಕೋಟಿ ರೂಪಾಯಿ ಆಸ್ತಿ ಹೇಗೆ ಸಂಪಾದಿಸಿದ್ದಾರೆ ಎಂಬುದು ಗೊತ್ತಿದೆ. ಜಮೀರ್ ಅಹ್ಮದ್ ಅಕ್ರಮಗಳ ದಾಖಲೆ ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಅಲ್ತಾಫ್ ಪಾಷಾ ಸವಾಲು ಹಾಕಿದ್ದಾರೆ.
ಸೋಮವಾರ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡ ಬಳಿಕ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಚಾಮರಾಜಪೇಟೆಯಲ್ಲಿರುವ ಜಮೀರ್ ಮನೆ ಬಾಡಿಗೆ ಮತ್ತು ಅಡ್ವಾನ್ಸ್ ನನ್ನದು. ನನ್ನ ಕೈ ಹಿಡಿತೀನಿ, ಕಾಲು ಹಿಡಿತೀನಿ ವೋಟ್ ಹಾಕಿಸು ಎಂದಿದ್ದ. ಜಮೀರ್ ಅಹ್ಮದ್ ನನ್ನ ಬಳಿ ಬೇಡಿಕೊಂಡ ವಿಡಿಯೋ ಇದೆ ಎಂದು ಹೇಳಿದರು.
ಮಾರ್ಕೆಟ್ ನಲ್ಲಿ ಬಡವರ 10 ಅಂಗಡಿಗಳನ್ನು ಮಾರಾಟ ಮಾಡಿದ್ದ, ಜಮೀರ್ ಮಾಡಿರುವ ಅಕ್ರಮಗಳ ಎಲ್ಲಾ ದಾಖಲೆ ಇದೆ. ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಅಲ್ತಾಫ್ ಸವಾಲು ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ