CONNECT WITH US  

ಚುನಾವಣಾ ಆಯೋಗದ ವೈಖರಿಗೆ ಎಚ್‌ಡಿಕೆ ಗರಂ

ಕೊಪ್ಪಳ: "ಚುನಾವಣಾ ಆಯೋಗದ ಅಧಿಕಾರಿಗಳು ಸುಮ್ಮನೆ ಎಲ್ಲೆಂದರಲ್ಲಿ ವಾಹನ ಹಿಡಿದು ತಪಾಸಣೆ ಮಾಡಿ ಜಪ್ತಿ ಮಾಡುತ್ತಿದ್ದಾರೆ. ನಾವು ಚುನಾವಣೆ ಮಾಡಬೇಕೋ? ಬೇಡವೋ? ಇದು ಯಾವ ನೀತಿ ಸಂಹಿತೆ' ಎನ್ನುವ ಮೂಲಕ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಯೋಗದ ಕಾರ್ಯ ವೈಖರಿಯನ್ನು ಟೀಕಿಸಿದರು.

ಯಲಬುರ್ಗಾದಲ್ಲಿ ಮಾತನಾಡಿ, ಆಯೋಗದ ಅಧಿಕಾರಿಗಳು ಸಮಾವೇಶ, ಪ್ರಚಾರ ನಡೆಸಲು ಅನುಮತಿ ನೀಡುತ್ತಿಲ್ಲ. ನಮ್ಮ ವಾಹನ ಚಾಲಕರಿಗೆ ವೇತನ ಕೊಟ್ಟಿದ್ದೇವೆ. ಆ ಹಣವನ್ನೂ ಜಪ್ತಿ ಮಾಡಿ, ಇದಕ್ಕೆ ದಾಖಲೆ ಕೊಡಿ ಎನ್ನುತ್ತಿದ್ದಾರೆ. ಕೂಡ್ಲಗಿಯಲ್ಲಿ ನಮ್ಮ ಪ್ರಚಾರಕ್ಕೂ ಅವಕಾಶ ಕೊಡುತ್ತಿಲ್ಲ. ಆಯೋಗದ ಅಧಿಕಾರಿಗಳ ಕಾರ್ಯ ವೈಖರಿ ಸರಿಯಿಲ್ಲ. ನಾನು ಫೋನ್‌ ಮಾಡಿ ಕೇಳಿದರೆ, ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಮಾತನ್ನಾಡುತ್ತಿದ್ದಾರೆ. ಅಧಿಕಾರಿಗಳಿಗೆ ನಾನೇಕೆ ಬೆದರಿಕೆ ಹಾಕಲಿ. ಅವರಿಗೆ ಮನವಿ ಮಾಡಿದ್ದೇನೆ ಎಂದರು.

ಅಧಿಕಾರಿಗಳು ಜನರ ರಕ್ತ ಹೀರಿ ಬದುಕುತ್ತಿದ್ದೀರಿ. ನೀವೇನು ಸಾಚಾನಾ? ಜಿಲ್ಲಾ ಮಂತ್ರಿ,ಶಾಸಕ ಹೇಳಿದಂತೆ ನಡೆದುಕೊಳ್ಳಬಾರದು. ಅಧಿಕಾರ ಶಾಶ್ವತವಲ್ಲ. ನೋಡೋಣ ಎಷ್ಟು ದಿನ ಅಂತ ಇದೇ ರೀತಿ ವರ್ತಿಸುತ್ತೀರಿ ಎಂದು ಗುಡುಗಿದರು. ಹಾಸನ ಡಿಸಿ ರೋಹಿಣಿ ಸಿಂಧೂರಿ ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಕಾನೂನಿನ ರಕ್ಷಣೆಯಿದೆ. ಯಾವುದೇ ಪಕ್ಷದ ರಕ್ಷಣೆಯಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.


Trending videos

Back to Top