CONNECT WITH US  

ವೇದಿಕೆಯಲ್ಲಿ ಸ್ಥಾನ ಇಲ್ಲ:ಹಿರಿಯ ಬಿಜೆಪಿಗ ರಾಮಚಂದ್ರ ಗೌಡ ಕಿಡಿ!

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ, ಜನಸಂಘದ ಕಾಲದ ನಾಯಕ ಮಾಜಿ ಸಚಿವ ರಾಮಚಂದ್ರ ಗೌಡ ಅವರು ಸಭೆಯಲ್ಲೇ ಬಹಿರಂಗವಾಗಿ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿ ಎಲ್ಲರಿಗೂ ಶಾಕ್‌ ನೀಡಿದ ಘಟನೆ ಶನಿವಾರ ನಡೆದಿದೆ. 

ಪಕ್ಷದ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಸಭೆಗೆ ಆಗಮಿಸಿದ್ದ ರಾಮಚಂದ್ರಗೌಡ ಅವರಿಗೆ ವೇದಿಕೆ ಆಹ್ವಾನಿಸದೆ ಕಡೆಗಣಿಸಲಾಗಿತ್ತು. ವೇದಿಕೆಯಲ್ಲಿ ರಾಜ್ಯ ಬಿಜೆಪಿ  ಉಸ್ತುವಾರಿ ಮುರಳೀಧರ ರಾವ್‌ ಅವರು ಉಪಸ್ಥಿತರಿದ್ದರು. 

ವೇದಿಕೆಯ ಎದುರಿಗೆ ಬಂದು ಬಹಿರಂಗ ಅಸಮಾಧಾನ ತೋಡಿಕೊಂಡ 80 ರ ಹರೆಯದ ಕಟ್ಟಾ ಬಿಜೆಪಿಗ ರಾಮಚಂದ್ರ ಗೌಡ ಅವರು 'ನಾನು ಪಕ್ಷದ ರಾಜ್ಯ ಸಂಸ್ಥಾಪಕರಲ್ಲಿ ಒಬ್ಬ. ಗೌರವಯುತವಾಗಿ  ವೇದಿಕೆಯಲ್ಲಿ ಆಸನ ನೀಡುವುದಾದರೆ ಬರುತ್ತೇನೆ.ಇಲ್ಲವಾದಲ್ಲಿ ಬೇಡ' ಎಂದು ಕಿಡಿ ಕಾರಿದರು. 

ಈ ವೇಳೆ ಎಲ್ಲಾ ನಾಯಕರು ಬನ್ನಿ ಸರ್‌ ಬನ್ನಿ..ನಿಮ್ಮ ಮೇಲೆ ಗೌರವವಿದೆ ಎಂದು ವೇದಿಕೆಯ ಮೇಲೆ ಕರೆದೊಯ್ದರು. 

Trending videos

Back to Top