CONNECT WITH US  

ಸಿಎಂ ಸುದ್ದಿಗೋಷ್ಠಿ; ನಾನು ಹಿಂದು; ಬಿಜೆಪಿ ನಾಯಕರ ವಿರುದ್ಧ ಕಿಡಿ 

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ.  

ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ದಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರವಿರುದ್ಧ ಹರಿಹಾಯ್ದರು. 

ಅಭಿವೃದ್ಧಿಯೇ ಮಂತ್ರ, ಆಡಳಿತ ವಿರೋಧಿ ಅಲೆ ಇಲ್ಲ

'ನಾವು ಚುನಾವಣೆಯಲ್ಲಿ ಅಭಿವೃದ್ಧಿ ಮತ್ತು ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಪ್ರಚಾರ ನಡೆಸುತ್ತೇವೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಇದನ್ನೆ ಮುಂದಿಟ್ಟು ಪ್ರಚಾರ ಮಾಡಿದ್ದೆವು. ಜನ ನಮ್ಮನ್ನು ಗೆಲ್ಲಿಸಿದರು. ಬಿಜೆಪಿಯವರ ಸುಳ್ಳು ಆರೋಪಗಳಿಗೆ ಮಣೆ ಹಾಕಲಿಲ್ಲ' 'ಎಂದರು. 

'ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ , ಜನ ಮತ್ತೆ ನಮ್ಮನ್ನು ಬೆಂಬಲಿಸುತ್ತಾರೆ' ಎಂದು ವಿಶ್ವಾಸ ವ್ಯಕ್ತ ಪಡಿಸಿದರು. 

ಹಾಸ್ಯಾಸ್ಪದ ಮತ್ತು ಮಹಾಸುಳ್ಳು!
'ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ  ಅವರು ಸರ್ಕಾರ ಅಪಘಾತ ಮಾಡಿ ನನ್ನನ್ನು ಕೊಲೆ ಮಾಡಲು ಯತ್ನಿಸಿದೆ ಎಂದಿದ್ದಾರೆ. ಹೇಳಿಕೆ ಹಾಸ್ಯಾಸ್ಪದ ಮತ್ತು ಮೂರ್ಖತನದಿಂದ ಕೂಡಿದೆ.  ರಾಜಕೀಯ ಲಾಭಕ್ಕಾಗಿ ಆಧಾರವಿಲ್ಲದೆ ಜನರನ್ನು ಮೂರ್ಖರನ್ನಾಗಿ ಮಾಡಲು ಹೇಳಿಕೆ ನೀಡಿದ್ದಾರೆ. ಪದೇ ಪದೇ ಸುಳ್ಳು ಹೇಳಿ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ. ಇವರೇ ಮೂರ್ಖರಾಗುತ್ತಾರೆ' ಎಂದರು. 

'ನಮ್ಮ ಸರ್ಕಾರವನ್ನು 10 % ಸರ್ಕಾರ ಅಂದಿದ್ದಾರಲ್ಲ. ಸರ್ಕಾರದಲ್ಲಿ ಯಾವ ಭ್ರಷ್ಟಾಚಾರದ ಆರೋಪಗಳಿವೆ ಅವರು ತೋರಿಸಲಿ .ಮೋದಿಯವರದ್ದು ಆಧಾರ ರಹಿತ ಸುಳ್ಳು ಆರೋಪ ಎಂದು ಸವಾಲು ಹಾಕಿದರು. ನಮ್ಮ ಕಾಲದಲ್ಲಿ ಗೋಲಿಬಾರ್‌ ಆಗಿಲ್ಲ.ರೈತ ನಾಯಕ, ರೈತ ಬಂಧು ಯಡಿಯೂರಪ್ಪಕಾಲದಲ್ಲಿ ರೈತರ ಮೇಲೆ ಗೋಲಿಬಾರ್‌ ನಡೆದಿದೆ ಎಂದರು. 

ನಾನು ಅವರಿಗಿಂದ ಒಳ್ಳೆಯ ಹಿಂದು 

ಅಮಿತ್‌ ಶಾ ನಾನು ಜೈನ್‌ ಅಲ್ಲ ಎಂದು ಹೇಳಲಿ.ಅವರಿಗಿಂತ ನಾನು ಅವರಿಗಿಂತ ಒಳ್ಳೆಯ ಹಿಂದು. ನನಗೆ ಮಾನವೀಯ ಮೌಲ್ಯಗಳ ಬಗ್ಗೆ ನಂಬಿಕೆ ಇದೆ. ಮನುಷ್ಯತ್ವ ಇದೆ. 


Trending videos

Back to Top