CONNECT WITH US  

ಜೀವ ಬೆದರಿಕೆ ಇದ್ದ ಕಾರಣ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ! ;ಶೋಭಾ

ಬೆಂಗಳೂರು: 'ಜೀವ ಬೆದರಿಕೆ ಇದ್ದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ' ಎಂದು ಸಂಸದೆ ಶೋಭಾ ಕರಂದ್ಲಾಜೆ ಬುಧವಾರ ಹೇಳಿಕೆ ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಮಠಕ್ಕೆ ಭೇಟಿ ನೀಡುವುದು ಬೇಡ ಎಂಬ ವಿಶೇಷ ಭದ್ರತಾ ಪಡೆಯ ಸಲಹೆಯಂತೆ ಅವರು ಭೇಟಿ ನೀಡಿಲ್ಲ. ಪ್ರಧಾನಿ ಅವರಿಗೂ ಈ ಬಗ್ಗೆ ಹೋಗಲು ಸಾಧ್ಯವಾಗಿಲ್ಲ ಎಂಬ ಬೇಸರವಿದೆ' ಎಂದರು.

ಮಾಧ್ಯಮವೊಂದರಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು 'ಎಸ್‌ಪಿಜಿ ಯಾವ ಕಾರಣಕ್ಕೆ ಮಠಕ್ಕೆ ಭೇಟಿ ನೀಡುವುದು ಬೇಡ ಎಂದಿದೆ ಎಂದು ನನಗೆ ಗೊತ್ತಿಲ್ಲ' ಎಂದರು. 

ಪ್ರಧಾನಿ ಮಂಗಳವಾರ ಮಧ್ಯಾಹ್ನ ನಗರದ ಎಂಜಿಎಂ ಮೈದಾನದಲ್ಲಿ ನಡೆದ ಬೃಹತ್‌ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಕೃಷ್ಣ ಮಠಕ್ಕೆ ತೆರಳಿರಲಿಲ್ಲ. ಅವರು ಕೃಷ್ಣ ಮಠಕ್ಕೆ ತೆರಳುವ ಬಗ್ಗೆ  ಕೆಲ ದಿನಗಳಿಂದ ಗೊಂದಲಗಳು ಇದ್ದವು. 

ಮಠದ ಸ್ಪಷ್ಟನೆ 
ಪರ್ಯಾಯ ಪಲಿಮಾರು ಮಠದ ವೆಂಕಟರಮಣ ಆಚಾರ್ಯ ಅವರು ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, 'ಮಠದಲ್ಲಿ ಯಾವುದೇ ಭದ್ರತಾ ಲೋಪವಿರಲಿಲ್ಲ. ಪೊಲೀಸರು ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಿದ್ದರು' ಎಂದಿದ್ದಾರೆ. 
 

Trending videos

Back to Top