CONNECT WITH US  

ಮೋದಿ,ರಾಹುಲ್‌ ಗಾಂಧಿ ವಿದೂಷಕರಿದ್ದಂತೆ:ಎಚ್‌ಡಿಕೆ

ಕೊಪ್ಪಳ: "ಪ್ರಧಾನಿ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಪದೇಪದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರೆಲ್ಲ ವಿದೂಷಕರಿದ್ದಂತೆ' ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕುಟುಕಿದರು.

ಕುಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಇವರೆಲ್ಲ ರಾಜ್ಯಕ್ಕೆ ಬಂದು ನಾಲ್ಕಾರು ಇತಿಹಾಸಕಾರರ ಹೆಸರು ಹೇಳಿದ ತಕ್ಷಣ ಜನ ಇವರನ್ನು ಒಪ್ಪಲ್ಲ. ಇವರೆಲ್ಲ ಸೀಜನ್‌ ರಾಜಕಾರಣಿಗಳು. ಇಬ್ಬರೂ ವಿದೂಷಕ ರಂತಿ ದ್ದಾರೆ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಇವರಿಗೆ ಗೊತ್ತಿಲ್ಲ. ದೇವೇಗೌಡರನ್ನು ಹೊಗಳಿದ ಮೋದಿ, ಜೆಡಿಎಸ್‌ 3ನೇ ಸ್ಥಾನಕ್ಕೆ ಬರುತ್ತೆ ಮತ ಹಾಕಬೇಡಿ ಎಂದಿರುವ ಕುರಿತು ಅವರನ್ನೇ ಕೇಳಬೇಕು. ಮೇ 12ರಂದು ಮತದಾರ ಎಲ್ಲರ ಹಣೆಬರಹ ಬರೆಯಲಿದ್ದಾರೆ ಎಂದರು.

ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಸೋಲಿನ ಭಯ ಶುರುವಾಗಿದೆ. ಹಾಗಾಗಿ ಚಿತ್ರನಟರನ್ನು ಕರೆತಂದು ಪ್ರಚಾರ ಶುರು ಮಾಡಿದ್ದಾರೆ. ಚಿತ್ರನಟರು ದುಡ್ಡು ಕೊಟ್ಟರೆ ಯಾವ ಪಕ್ಷದ ಪರವಾದರೂ ಪ್ರಚಾರ ಮಾಡಬಲ್ಲರು. ಚಿತ್ರನಟರು ಪ್ರಚಾರ ಮಾಡಿದ ತಕ್ಷಣ ಯಾರೂ ಓಟು ಹಾಕಲ್ಲ. 2013ರ ಚುನಾವಣೆ ವೇಳೆ ನಟ ಚಿರಂಜೀವಿ ಕೆಲ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಆದರೆ ಅಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆದ್ದಿದ್ದರು ಎಂದರು.


Trending videos

Back to Top