CONNECT WITH US  

ಶಾಸಕಾಂಗ ಸಭೆಯಲ್ಲಿ ಭಾವುಕರಾದ ಸಿದ್ದರಾಮಯ್ಯ,ಬೆಂಬಲಿಗರು 

ಬೆಂಗಳೂರು: ಉಸ್ತುವಾರಿ ಸಿಎಂ ಸಿದ್ದರಾಮಯ್ಯ ಮತ್ತು ಕೆಲ ಬೆಂಬಲಿಗರು ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಬಗ್ಗೆ ವರದಿಯಾಗಿದೆ. 

ಸ್ಥಿರ ಸರ್ಕಾರ, ಜನಪರ ಆಡಳಿತ ನೀಡಿದ ಹೊರತಾಗಿಯೂ ಬಹುಮತ ಪಡೆಯಲು ವಿಫ‌ಲವಾಗಿರುವ ಬಗ್ಗೆ ನನಗೆ ನೋವಿದೆ.ಈಗ ನನ್ನ ಪಕ್ಷದವರೇ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದು, ಈ ವೇಳೆ ಸಿದ್ದರಾಮಯ್ಯ ಅವರ ಕೆಲ ಬೆಂಬಲಿಗರು ಭಾವುಕರಾಗಿರುವುದಾಗಿ ವರದಿಯಾಗಿದೆ. 

ಬಿಜೆಪಿಯವರಿಗೆ ಸರ್ಕಾರ ರಚಿಸಲು ಅವಕಾಶ ಕೊಡುವುದಿಲ್ಲ 

ಶಾಸಕಾಂಗ ಸಭೆಯ ಬಳಿಕ ಕೆಪಿಸಿಸಿ ಕಚೇರಿ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ 'ನಾವು ಬಿಜೆಪಿಯವರಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವುದಿಲ್ಲ. 104 ಶಾಸಕರನ್ನು ಹೊಂದಿರುವ ಅವರು ಹೇಗೆ ಸರ್ಕಾರ ರಚಿಸುತ್ತಾರೆ? , ಎಲ್ಲಾ ಕಾಂಗ್ರೆಸ್‌ ಶಾಸಕರು ನಮ್ಮೊಂದಿಗೆ ಇದ್ದಾರೆ.ರಾಜ್ಯಪಾಲರು ಬಿಜೆಪಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರೆ ಅದು ಸಂವಿಧಾನ ಬಾಹಿರ' ಎಂದರು. 

Trending videos

Back to Top