CONNECT WITH US  

ಬಿಜೆಪಿಗೆ ಅವಕಾಶ ನೀಡಿದರೆ ಭಾರೀ ಪ್ರತಿಭಟನೆ; ರಾಜ್ಯಪಾಲರಿಗೆ ಒತ್ತಡ ?

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕು ಎನ್ನುವ ಉದ್ದೇಶದೊಂದಿಗೆ ಕಾಂಗ್ರೆಸ್‌ ಮತ್ತು ಇತರ ಸಮಾನ ಮನಸ್ಕ ಪಕ್ಷಗಳು ಒಂದಾಗಿವೆ. ಸರ್ಕಾರ ರಚನೆಗೆ ಬಹುಮತ ಇರದ ಬಿಜೆಪಿಗೆ ರಾಜ್ಯಪಾಲರು ಅವಕಾಶ ನೀಡಿದರೆ ಬೃಹತ್‌ ಪ್ರತಿಭಟನೆ ನಡೆಸುವ ಮುನ್ಸೂಚನೆ ನೀಡಿ ಒತ್ತಡ ಹೇರಲು ಮುಂದಾಗಿವೆ. 

104 ಸ್ಥಾನ ಹೊಂದಿರುವ ಬಿಜೆಪಿಗೆ ಬಹುಮತ ಇಲ್ಲ. ಅವರಿಗೆ ಅವಕಾಶ ನೀಡುವುದು ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಸಾಧ್ಯವಿಲ್ಲ, ಇದು ಕಾನೂನು ಬಾಹಿರವಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ. 

ಎಲ್ಲಿಯಾದರೂ ರಾಜ್ಯಪಾಲರು ಬಿಜೆಪಿ ಅವಕಾಶ ನೀಡಿದರೆ ಕಾಂಗ್ರೆಸ್‌ ಶಾಸಕರು, ಸಂಸದರು, ರಾಷ್ಟ್ರೀಯ ನಾಯಕರು, ಜೆಡಿಎಸ್‌ ಶಾಸಕರು, ಮುಖಂಡರು , ಇತರ ಕೆಲ ಪ್ರಾದೇಶಿಕ ಪಕ್ಷಗಳ ನಾಯಕರು ಆಹೋರಾತ್ರಿ ಧರಣಿ ನಡೆಸುವ ಮುನ್ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. 

ಈಗಾಗಲೇ ಬಿಜೆಪಿಯು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದೆ. ಇನ್ನೊಂದೆಡೆ ಕಾಂಗ್ರೆಸ್‌ ಮೂರನೇ ಮತ್ತು ಜೆಡಿಎಸ್‌ ಸರಕಾರ ರಚಿಸುವುದಕ್ಕೆ ಬೇಷರತ್‌ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ನೀಡಿದೆ. ಇದರ ಆಧಾರದ ಮೇಲೆ ಕಾಂಗ್ರೆಸ್‌ ಜತೆ ಮೈತ್ರಿ ಸರಕಾರ ರಚಿಸಲು ಅವಕಾಶ ಕೋರಿ ಜೆಡಿಎಸ್‌ ಕೂಡ ರಾಜ್ಯಪಾಲರ ಮುಂದೆ ಹಕ್ಕು ಪ್ರತಿಪಾದಿಸಿದೆ.

ಈಗ ಚೆಂಡು ರಾಜ್ಯಪಾಲರ ಅಂಗಣದಲ್ಲಿದ್ದು, ಬಿಜೆಪಿಗೆ ಅವಕಾಶ ನೀಡುತ್ತಾರೋ, ಜೆಡಿಎಸ್‌ -ಕಾಂಗ್ರೆಸ್‌ ಸರ್ಕಾರ ರಚಿಸಲು ಅವಕಾಶ ಮಾಡಿ ಕೊಡುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ. 

Trending videos

Back to Top