CONNECT WITH US  

ದುಡುಕಿ ಮಾತನಾಡಿ ನಂತರ ಪಶ್ಚಾತಾಪ ಪಟ್ಟ ಎಚ್‌ಡಿಕೆ

ಹಿರೇಕೆರೂರ: ದುಡುಕಿ ಮಾತನಾಡಿ ಪಶ್ಚಾತಾಪ ಪಡುವುದಕ್ಕಿಂತ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಮಾತನಾಡಬೇಕು. ಮೊನ್ನೆ ಇದೇ ರೀತಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದುಡುಕಿ ಮಾತನಾಡಿ ನಂತರ ಪಶ್ಚಾತಾಪ ಪಟ್ಟಿದ್ದಾರೆ. ಯಾರೇ ಆಗಲಿ ನಾಲಿಗೆಯನ್ನು ಹತೋಟಿಯಲ್ಲಿಟ್ಟು ಕೊಂಡಿರಬೇಕು ಎಂದು ತರಳಬಾಳು ಸಾಣೇಹಳ್ಳಿ ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಟ್ಟಿಹಳ್ಳಿ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಸಿದ್ದಪ್ಪ ಇಂಗಳಗೊಂದಿ ಅವರ ನಿವಾಸದ ಆವರಣದಲ್ಲಿ ಏರ್ಪಡಿಸಿದ್ದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ರಾಜಕೀಯ ನಾಯಕರು ನಾಲಿಗೆ ಹರಿಬಿಟ್ಟಿದ್ದನ್ನು ನೀವೆಲ್ಲ ಕೇಳಿರಬಹುದು. ನಿಮ್ಮಪ್ಪನಾಣೆಗೂ ಸಿಎಂ ಆಗಲ್ಲ ಎಂದು ಅಂದುಕೊಂಡವರು ಈಗ ಪರಸ್ಪರ ಪ್ರೀತಿ, ವಿಶ್ವಾಸದೊಂದಿಗಿದ್ದಾರೆ. ಮಾತುಗಳ ಬಗ್ಗೆ ಸರಿಯಾದ ಚಿಂತನೆ ಇಲ್ಲ. ಮಾತು, ಮನಸ್ಸು, ಕೃತಿ ಒಂದಾಗಿರಬೇಕು ಎಂದರು.

Trending videos

Back to Top