CONNECT WITH US  

ಸಿಎಂ ರಾಜೀನಾಮೆ ಕೊಡಲಿ: ವಾಟಾಳ್‌

ಕೊಪ್ಪಳ: ಸಾಲ ಮನ್ನಾ ಮಾಡಲಾಗದಿದ್ದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ರಾಜೀನಾಮೆ ಕೊಟ್ಟು
ಹೊರ ನಡೆಯಬೇಕು ಎಂದು ಕನ್ನಪರ ಸಂಘಟನೆಗಳ ಒಕ್ಕೂಟದ ಮುಖಂಡ ವಾಟಾಳ್‌ ನಾಗರಾಜ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರ
ಯಾವುದೇ ನಾಟಕ ಆಡಬಾರದು. ಕುಮಾರಸ್ವಾಮಿಯವರು ರಾಜ್ಯದ ಜನರ ಮುಲಾಜಿನಲ್ಲಿಲ್ಲ. ಕಾಂಗ್ರೆಸ್‌ನ
ಮುಲಾಜಿನಲ್ಲಿದ್ದೇನೆ ಅನ್ನೋದಾದ್ರೆ ಮುಖ್ಯಮಂತ್ರಿಯಾಗಿ ಯಾಕಿರಬೇಕು. ಸಿಎಂ ಸ್ಥಾನ ಬಿಟ್ಟು ಹೋಗಬೇಕು ಎಂದರು. ಸರ್ಕಾರ ರೈತರ ಪರವಾಗಿ ಪ್ರಾಮಾಣಿಕ ನಿರ್ಧಾರ ತೆಗೆದುಕೊಳ್ಳಬೇಕು.

ಸಮ್ಮಿಶ್ರ ಸರ್ಕಾರ ರಚಿಸೋದಕ್ಕೆ ಅವರಿಗೆ ನಂಬಿಕೆಯಿದೆ. ನಾವಿಬ್ಬರೂ ಒಂದಾಗಿದ್ದೇವೆ ಎನ್ನುತ್ತಿದ್ದಾರೆ. ಆದರೆ ಸಾಲ
ಮನ್ನಾ ವಿಚಾರದಲ್ಲಿ ಏಕೆ ನಂಬಿಕೆ ಬರುತ್ತಿಲ್ಲ. ಹಣಕಾಸು ಖಾತೆಗಾಗಿ ಜೆಡಿಎಸ್‌-ಕಾಂಗ್ರೆಸ್‌ ಸುಮ್ಮನೆ ನಾಟಕ
ಮಾಡುತ್ತಿದ್ದಾರೆ. ಇಬ್ಬರೂ ಸೇರಿ ಸಾಲ ಮನ್ನಾ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲೇಬೇಕು. ಇಲ್ಲದಿದ್ದರೆ ರಾಜೀನಾಮೆ
ಕೊಡಲಿ, ಮತ್ತೆ ರಾಜ್ಯದಲ್ಲಿ ಚುನಾವಣೆಯಾಗಲಿ ಎಂದರು.


Trending videos

Back to Top