CONNECT WITH US  

ಬಾದಾಮಿಯತ್ತಲೂ ಸುಳಿದಿಲ್ಲ...

ಬಾಗಲಕೋಟೆ: ಬಾದಾಮಿ ಮತಕ್ಷೇತ್ರದಿಂದ ಪ್ರಯಾಸದ ಗೆಲುವು ಸಾಧಿಸುವ ಮೂಲಕ ರಾಜಕೀಯ ಜೀವನದ ಗೌರವ ಉಳಿಸಿದ ಕ್ಷೇತ್ರದ ಜನರತ್ತ ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕ್ಷೇತ್ರದತ್ತ ಮುಖ ಮಾಡ್ತಿಲ್ಲ. ಹೀಗಾಗಿ ಕ್ಷೇತ್ರದ ಜನರು ಆರಂಭದಲ್ಲೇ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಬಾದಾಮಿ ಕ್ಷೇತ್ರಕ್ಕೆ ಈಗ ಸಿದ್ದರಾಮಯ್ಯ ಅವರೇ ಶಾಸಕರು. ಅವರು 2 ಕ್ಷೇತ್ರದಲ್ಲಿ ಗೆದ್ದಿದ್ದರೆ ಬಾದಾಮಿ ನಿರ್ಲಕ್ಷé ಮಾಡಿದ್ದಾರೆಂದು ಕೆಲವರು ಭಾವಿಸುತ್ತಿದ್ದರು. ಆದರೆ, ಒಂದೇ ಕ್ಷೇತ್ರದಲ್ಲಿ ಗೆದ್ದಿರುವ ಅವರು ಐದು ವರ್ಷ
ಈ ಕ್ಷೇತ್ರವನ್ನೇ ಪ್ರತಿನಿಧಿಸುತ್ತಾರೆ. ಕ್ಷೇತ್ರದ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೆ ಅವರು ಇರಲೇಬೇಕು. ಜತೆಗೆ ಹಲವಾರು ಕಾರ್ಯಗಳಿಗೆ ಶಾಸಕರ ಪತ್ರ ಬೇಕಾಗುತ್ತದೆ. ಇಂತಹ ವೇಳೆ ಶಾಸಕರ ಪತ್ರಗಳನ್ನು ಎಲ್ಲಿ,ಯಾರಿಂದ ಪಡೆಯುವುದು ಎಂಬ ಗೊಂದಲವೂ ಮೂಡಿದೆ.

ಸೋತವರು ಬಂದ್ರು, ಗೆದ್ದವರು ಬರ್ಲಿಲ್ಲ: ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ 1696 ಮತಗಳಿಂದ ಗೆದ್ದಿದ್ದು, ಅವರ ವಿರುದಟಛಿ ಸ್ಪರ್ಧಿಸಿದ್ದ ಬಿಜೆಪಿಯ ಶ್ರೀರಾಮುಲು, ಫಲಿತಾಂಶದ ಬಳಿಕ 2 ಬಾರಿ ಕ್ಷೇತ್ರಕ್ಕೆ ಬಂದಿದ್ದಾರೆ. ತಮ್ಮ ಚುನಾವಣೆಗೆ ಓಡಾಡಿದವರಿಗೆ ಕೃತಜ್ಞತೆ ಹೇಳುವ ಜತೆಗೆ ಈಚೆಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಜಮ್ಮನಕಟ್ಟಿ (ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರ ಸ್ವಂತ ಊರು) ಗ್ರಾಮಕ್ಕೆ ಶುಕ್ರವಾರ ಭೇಟಿ   ನೀಡಿ, 
ಆತ್ಮಹತ್ಯೆ ಮಾಡಿಕೊಂಡ ರೈತ ರಾಜಪ್ಪ ಹನುಮಂತಪ್ಪ ಜಲಗೇರಿ ಕುಟುಂಬಕ್ಕೆ ಸಾಂತ್ವನ ಹೇಳುವ ಜತೆಗೆ 50 ಸಾವಿರ ರೂ. ವೈಯಕ್ತಿಕ ಪರಿಹಾರ, ಮೂರು ಮಕ್ಕಳ ಶಿಕ್ಷಣದ ಖರ್ಚು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸರ್ಕಾರ ರಚನೆ ಒತ್ತಡ ಹಾಗೂ ಜಮಖಂಡಿ
ಶಾಸಕರಾಗಿದ್ದ ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದಿಲ್ಲ.ಶಾಸಕರೊಬ್ಬರು ನಿಧನರಾದಾಗ ಬಾದಾಮಿಯಲ್ಲಿ ಅಭಿನಂದನೆ ಸಮಾರಂಭ ನಡೆಸುವುದು ಸೂಕ್ತವಲ್ಲ.ಹೀಗಾಗಿ ಜೂ.1 ಮತ್ತು 2ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇನ್ನೊಂದು ವಾರದಲ್ಲಿ ಬಾದಾಮಿಗೆ ಬರಲಿದ್ದಾರೆ.
- ಎಂ.ಬಿ. ಸೌದಾಗರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಸಿದ್ದರಾಮಯ್ಯ ಜೂ.7ರಿಂದ 11ರವರೆಗೆ
ಬಾದಾಮಿಯಲ್ಲೇ ಇರಲಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡ ಜಮ್ಮನಕಟ್ಟಿ ರೈತನ ಮನೆಗೆ ಭೇಟಿ
ನೀಡಲಿದ್ದಾರೆ. ಅಲ್ಲದೇ ಕ್ಷೇತ್ರದ ಜನತೆಯ ಅಹವಾಲು ಸ್ವೀಕಾರ, ಕಾರ್ಯಕರ್ತರ ಸಭೆ, ಕ್ಷೇತ್ರದ ಜನರಿಗೆ 
ಅಭಿನಂದನೆ ಸಲ್ಲಿಸಲಿದ್ದಾರೆ. ಅವರು ಬಾದಾಮಿಗೆ ಬಂದಾಗ ಒಂದು ಸೂಕ್ತ ಮನೆ ಆಯ್ಕೆ ಮಾಡಿಕೊಂಡು, ಇಲ್ಲೇ
ವಾಸ್ತವ್ಯಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
- ಹೊಳೆಬಸು ಶೆಟ್ಟರ, ಸಿದ್ದರಾಮಯ್ಯ ಆಪ್ತ

- ಶ್ರೀಶೈಲ ಕೆ. ಬಿರಾದಾರ


Trending videos

Back to Top